

ಅಥಣಿ: ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಅಜ್ಜ-ಅಜ್ಜಿಯರ ಪಾತ್ರ ಮಹತ್ವದ್ದಾಗಿದೆ. ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ವಿಷಾದನೀಯ ಎಂದು ಗಜಾನನ ವಿದ್ಯಾ ಸಂಸ್ಥೆ ಅಧ್ಯಕ್ಷೆ ಅನುರಾಧಾ ದೇಶಪಾಂಡೆ ಹೇಳಿದರು.
ಪಟ್ಟಣದ ಗಜಾನನ ವಿದ್ಯಾಸಂಸ್ಥೆಯ ಆರುಣಿ ಹಾಗೂ ಸಂದೀಪನಿ ಶಿಶುವಿಹಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಜ್ಜ-ಅಜ್ಜಿಗೆ ನಮನ’ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬದ ಹಿರಿಯರನ್ನು ಗೌರವದಿಂದ ಕಾಣುವ ಸಂಸ್ಕಾರ ಬಾಲ್ಯದಿಂದಲೇ ಬೆಳೆಸಬೇಕಿದೆ ಎಂದರು. ನಾಯಕಿ ಪಲ್ಲವಿ ಕುಲಕರ್ಣಿ ಮಾತನಾಡಿದರು. ಅಜ್ಜ-ಅಜ್ಜಿಯರಿಗಾಗಿ ಮನರಂಜನೆ ಚಟುವಟಿಕೆಗಳು ಜರುಗಿದವು. ಮಕ್ಕಳು, ಸೊಸೆಯರು ಹಾಗೂ ಕುಟುಂಬದ ಸದಸ್ಯರು ಅಜ್ಜ-ಅಜ್ಜಿಯರಿಗೆ ಪಾದಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಆಡಳಿತ ಮಂಡಳಿ ಸದಸ್ಯೆಯರಾದ ತೃಪ್ತಿ ಕುಲಕರ್ಣಿ, ರಮಾ ಜೋಶಿ, ಪ್ರಜ್ಞಾ ದೇಶಪಾಂಡೆ, ಸಾರಿಕಾ ಸಂಗೋರಾಮ, ಶಾರದಾ ಹನುಮಗೌಡರ ಇತರರಿದ್ದರು.