ಅವಕಾಶ ಸಿಕ್ಕಾಗ ಪ್ರತಿಭೆ ಪ್ರದರ್ಶಿಸಲಿ

ಅಂಕಲಿಯ ಗೊಮ್ಮಟೇಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬರಮಾಡಿಕೊಳ್ಳುವ ಮೂಲಕ ಗಣ್ಯರು ಚಾಲನೆ ನೀಡಿದರು. ಡಾ.ಎನ್.ಮಗದುಮ್ಮ, ಹಜರತ್ ಅಲಿ ಪಾನಾರಿ ಇತರರಿದ್ದರು.
ಅಂಕಲಿಯ ಗೊಮ್ಮಟೇಶ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬರಮಾಡಿಕೊಳ್ಳುವ ಮೂಲಕ ಗಣ್ಯರು ಚಾಲನೆ ನೀಡಿದರು. ಡಾ.ಎನ್.ಮಗದುಮ್ಮ, ಹಜರತ್ ಅಲಿ ಪಾನಾರಿ ಇತರರಿದ್ದರು.
Published on
ಮಾಂಜರಿ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ಸರ್ವಾಂಗೀಣ ಬೆಳವಣಿಗೆ ಸಾಧ್ಯವೆಂದು ಅಂಕಲಿಯ ಗೊಮ್ಮಟೇಶ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ.ಎನ್.ಎ.ಮಗದುಮ್ಮ ಅಭಿಪ್ರಾಯಪಟ್ಟರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿರುವ ಗೋಮಟೇಶ ಶಿಕ್ಷಣ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ ಹಾಗೂ ಡಾ.ಎನ್.ಎ.ಮಗದುಮ್ಮ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಿಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಸಿಕ್ಕ ಅವಕಾಶದಲ್ಲಿ ಪ್ರತಿಭೆ ತೋರಲು ವಿದ್ಯಾರ್ಥಿಗಳು ಸಿದ್ಧರಾಗಿರಬೇಕು ಎಂದು ಹೇಳಿದರು.
ನರ್ಸಿಂಗ್ ಮಹಾವಿದ್ಯಾಲಯದ ಪ್ರಾಚಾರ್ಯ ಹಜರತ್‌ಅಲಿ ಪಾನಾರಿ ಮಾತನಾಡಿ, ಇತ್ತೀಚೆಗೆ ಭಾರತ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ವಿಶ್ವದೆಲ್ಲೆಡೆ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಾಚಾರ್ಯ ಪ್ರಸನ್ನ ಸಾವನೂರ, ಎನ್.ಎಸ್.ನಿಡುಗುಂದೆ, ಲಲಿತಾ ಮಗುದುಮ್ಮ, ಸುರೇಶ ಚೌಗುಲಾ, ಹರ್ಷವರ್ಧನ ಮಗದುಮ್ಮ, ರಾಮಗೌಡ ಪಾಟೀಲ, ಯಾಕೂಬ್ ತಾಂಬಾಟ್ ಇತರರಿದ್ದರು. ಅಶ್ವಿನಿ ಜಂಗಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net