ವಿದ್ಯಾಭ್ಯಾಸದತ್ತ ಗಮನ ಹರಿಸಲಿ

ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ರವಿ ರಂಗಸುಭೆ, ವಿವೇಕ ಜತ್ತಿ, ಎಸ್.ಕೆ.ಮಠದ, ಅಡಿವೇಶ ಗವಿಮಠ ಇತರರಿದ್ದರು.

Published on
ಗೋಕಾಕ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆ ಜತೆಗೆ ವಿದ್ಯಾಭ್ಯಾಸದತ್ತ ಗಮನ ಹರಿಸಿ ಸಾಧಕರಾಗಬೇಕು ಎಂದು ನಗರಸಭೆ ಪೌರಾಯುಕ್ತ ರವಿ ರಂಗಸುಭೆ ಹೇಳಿದರು.
ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಈಚೆಗೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರಿಸದ ಕಡೆಗೆ ಗಮನ ಹರಿಸಿ ನಗರಸಭೆಯಿಂದ ಪ್ರತಿದಿನ ಬರುವ ಕಸದ ಗಾಡಿಯಲ್ಲೇ ಕಸ ವಿಂಗಡಿಸಿ ನೀಡಲು ಪಾಲಕರಿಗೆ ತಿಳಿ ಹೇಳಬೇಕು. ಪರಿಸದ ಬಗ್ಗೆ ಕಾಳಜಿ ವಹಿಬೇಕು ಎಂದರು.
ನಿರ್ದೇಶಕ ವಿವೇಕ ಜತ್ತಿ, ಪ್ರಾಚಾರ್ಯ ಎಸ್.ಕೆ.ಮಠದ, ಆಡಳಿತಾಽಕಾರಿ ಅಡಿವೇಶ ಗವಿಮಠ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net