ಸೃಜನಶೀಲತೆ ಬೆಳೆಸಿಕೊಳ್ಳಲಿ

ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಾ.ಡಿ.ಎಚ್.ರಾವ್, ಡಾ.ಸಂಜಯ ಅಂಕಲಿ, ಡಾ.ಶಶಿಕಾಂತ ವಾಳಕಿ, ಡಾ.ಸಚಿನ ಮೆಕ್ಕಳಕಿ ಇತರರಿದ್ದರು.
ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಾ.ಡಿ.ಎಚ್.ರಾವ್, ಡಾ.ಸಂಜಯ ಅಂಕಲಿ, ಡಾ.ಶಶಿಕಾಂತ ವಾಳಕಿ, ಡಾ.ಸಚಿನ ಮೆಕ್ಕಳಕಿ ಇತರರಿದ್ದರು.
Published on

ಚಿಕ್ಕೋಡಿ: ವಿದ್ಯಾರ್ಥಿಗಳ ಬುದ್ಧಿಮಟ್ಟ ಅರ್ಥೈಸಿಕೊಂಡು ಪಾಠ ಮಾಡುವುದು ಪರಿಣಾಮಕಾರಿ ಬೋಧನೆಯಾಗಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಫಾರ್ಮರ್ ಡೀನ್ ಡಾ.ಡಿ.ಎಚ್.ರಾವ್ ಹೇಳಿದರು.

ಶಮನೇವಾಡಿಯ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅರಿವಿನ ವಿಶ್ಲೇಷಣೆ (ಕಾಗ್ನಿಟಿವ್ ಅನಾಲಿಸಿಸ್) ಕಾರ್ಯಾಗಾರದಲ್ಲಿ ಮಾತನಾಡಿ, ವ್ಯಕ್ತಿತ್ವ ವಿಕಸನ ಎಂದರೆ ಶಿಸ್ತಿನ ಜತೆಗೆ ಸೃಜನಾತ್ಮಕತೆ ಬೆಳೆಸಿಕೊಳ್ಳವುದು. ವಿದ್ಯಾರ್ಥಿಗಳ ಅರಿವಿನ ಪ್ರಕ್ರಿಯೆ ಅರ್ಥ ಮಾಡಿಕೊಳ್ಳುವುದರಿಂದ ಪರಿಣಾಮಕಾರಿ ಬೋಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಪ್ರಾಚಾರ್ಯ ಡಾ.ಸಂಜಯ ಅಂಕಲಿ ಮಾತನಾಡಿ, ಅರಿವಿನ ವಿಶ್ಲೇಷಣೆ ಪ್ರಮುಖ ಅಂಶವೆಂದರೆ ಪ್ರತಿಯೊಬ್ಬ ವಿದ್ಯಾರ್ಥಿ ವಿಭಿನ್ನ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರಸಂತ ಆಚಾರ್ಯ 108 ಗುಣಧರನಂದಿ ಮಹಾರಾಜರು ತಮಗೆ ಬಂದ ಸ್ಥಿತಿ ಬೇರೆ ಯಾರಿಗೂ ಬಾರದಿರಲೆಂದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಜೀವನ ರೂಪಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಸ್ಥೆ ಶಿಕ್ಷಣದ ಜತೆಗೆ ಸಂಸ್ಕಾರ, ವ್ಯಸನಮುಕ್ತ ಸಮಾಜ ನಿರ್ಮಿಸುವ ಗುರಿ ಹೊಂದಿದೆ ಎಂದರು.
ಡಾ.ಶಶಿಕಾಂತ ವಾಳಕಿ, ಕೆ.ಆರ್.ಪಾಟೀಲ, ಪ್ರಶಾಂತ ಶೇಡಬಾಳಕರ, ಸ್ನೇಹಾ ವಾಳಕಿ, ಅಶ್ವಿನಿ ಮೊನಾಚಾರ್ಯ, ರಾಣಿ ಸುಟುರೆ, ರವಿ ವಾಳಕೆ, ಜ್ಞಾನೇಶ್ವರ ನಾಯಿಕ, ಮುತ್ತಣ್ಣ ಗೋಳಪ್ಪಗೋಳ, ಸುಪ್ರಿಯಾ ಗೋಳಪ್ಪಗೋಳ, ಪಿರಗೌಡ ಹುಳಿಕೊಪ್ಪೆ, ಪ್ರತಿಭಾ ಖೋತ, ಡಾ.ಸಚಿನ ಮೆಕ್ಕಳಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net