ರಾಷ್ಟ್ರ ನಿರ್ಮಾಣಕ್ಕೆ ಯುವಕರು ಕೈಜೋಡಿಸಲಿ

ಇಟಗಿ ಗ್ರಾಮದ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಣಪತಿ ನಾಯ್ಕ ಮಾತನಾಡಿದರು. ಎಸ್.ಎಸ್.ಶಾಸ್ತ್ರಿ, ವಿ.ಬಿ.ಸಾಣಿಕೊಪ್ಪ, ಬಿ.ವಿ.ಬೆಣಚಮರ್ಡಿ ಇತರರಿದ್ದರು.
ಇಟಗಿ ಗ್ರಾಮದ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಣಪತಿ ನಾಯ್ಕ ಮಾತನಾಡಿದರು. ಎಸ್.ಎಸ್.ಶಾಸ್ತ್ರಿ, ವಿ.ಬಿ.ಸಾಣಿಕೊಪ್ಪ, ಬಿ.ವಿ.ಬೆಣಚಮರ್ಡಿ ಇತರರಿದ್ದರು.
Published on
ಇಟಗಿ: ನಿರಂತರ ಪ್ರಯತ್ನ ಮತ್ತು ಸಾಂಸ್ಕೃತಿಕ ಮೌಲ್ಯ ರೂಢಿಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗಣಪತಿ ನಾಯ್ಕ ಹೇಳಿದರು.
ಜನತಾ ಶಿಕ್ಷಣ ಪ್ರಸಾರ ಸಮಿತಿಯ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯದೇ ಅಧ್ಯಯನದಲ್ಲಿ ಆಸಕ್ತಿವಹಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದರು.
ಉಪನ್ಯಾಸಕ ಎಸ್.ಎಸ್.ಶಾಸ್ತ್ರಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ವಿ.ಬಿ.ಸಾಣಿಕೊಪ್ಪ, ಉಪಾಧ್ಯಕ್ಷ ಬಿ.ವಿ.ಬೆಣಚಮರ್ಡಿ, ಕಾರ್ಯದರ್ಶಿ ಎಸ್.ಬಿ.ತುರಮರಿ, ಕೋಶಾಧಿಕಾರಿ ಎಂ.ಎಸ್.ಸಾಣಿಕೊಪ್ಪ, ನಿರ್ದೇಶಕರಾದ ಎಸ್.ಪಿ.ಸಾಣಿಕೊಪ್ಪ, ಎಸ್.ವಿ.ಗಣಾಚಾರಿ, ಆರ್.ಬಿ.ಇಟಗಿ, ಬಿ.ಎಸ್.ಪುಂಡಿ, ಪ್ರಾಚಾರ್ಯರಾದ ಕೆ.ಬಿ.ಕಾಪೋಲಿ, ಆರ್.ಬಿ.ಹುಣಶೀಕಟ್ಟಿ ಇತರರಿದ್ದರು. ಈಶ್ವರ ಕರಮಳನವರ ನಿರೂಪಿಸಿದರು. ಲಲಿತಾ ಗೌಡ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net