ಯುವಕರು ಸಮಾಜದಲ್ಲಿ ಸತ್ಕಾರ್ಯ ಮಾಡಲಿ

ಗೋಕಾಕದಲ್ಲಿ ಹಮ್ಮಿಕೊಂಡಿದ್ದ 21ನೇ ಶರಣ ಸಂಸ್ಕೃತಿ ಉತ್ಸವದ ಯುವಜನೋತ್ಸವ ಮತ್ತು ಸಂಗೀತ ಸಮಾವೇಶದಲ್ಲಿ ನ್ಯಾಯಮೂರ್ತಿ ವಿ.ಶ್ರೀಶಾನಂದ, ಮುರುಘರಾಜೇಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಇತರರಿದ್ದರು.
ಗೋಕಾಕದಲ್ಲಿ ಹಮ್ಮಿಕೊಂಡಿದ್ದ 21ನೇ ಶರಣ ಸಂಸ್ಕೃತಿ ಉತ್ಸವದ ಯುವಜನೋತ್ಸವ ಮತ್ತು ಸಂಗೀತ ಸಮಾವೇಶದಲ್ಲಿ ನ್ಯಾಯಮೂರ್ತಿ ವಿ.ಶ್ರೀಶಾನಂದ, ಮುರುಘರಾಜೇಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಇತರರಿದ್ದರು.
Published on
ನಗರದ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂ.ಬಸವ ಸ್ವಾಮೀಜಿ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ 21ನೇ ಶರಣ ಸಂಸ್ಕೃತಿ ಉತ್ಸವದ ಯುವಜನೋತ್ಸವ ಮತ್ತು ಸಂಗೀತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ಆಹಾರ ಪದ್ಧತಿ, ಉಡುಗೆ-ತೊಡಿಗೆ, ಮೊಬೈಲ್, ತಂತ್ರಜ್ಞಾನಗಳತ್ತ ಭಾರತೀಯ ಯುವಕರನ್ನು ಆಕರ್ಷಿಸಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಯುವಕರು ತಂತ್ರಜ್ಞಾನ ಮಿತಬಳಕೆ ಹಾಗೂ ಸಾಮಾಜಿಕ ಜಾಗೃತಿಗೆ ಆದ್ಯತೆ ನೀಡುವುದು ಅಗತ್ಯವಾಗಿದೆ ಎಂದರು.
ವಿವಿಧ ಕ್ಷೇತ್ರದ 25ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಯಿತು. ಮುರುಘರಾಜೇಂದ್ರ ಸ್ವಾಮೀಜಿ, ಬಟಕುರ್ಕಿ ಚೌಕಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಚೆನ್ನೈನ ಸರಕು ಸೇವಾ ತೆರಿಗೆ ಮತ್ತು ಸುಂಕ ವಿಭಾಗದ ಹೆಚ್ಚುವರಿ ಆಯುಕ್ತ ಶಿವಪ್ರಕಾಶ ಬಡ್ಡಿ, ರಾಣಿ ಚನ್ನಮ್ಮ ವಿವಿ ಕುಲಸಚಿವ ಸಂತೋಷ ಕಾಮಗೌಡರ, ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಮಹೇಶ ಮಾಸಾಳ, ಡಾ.ಶಿವಾನಂದ ಮಗದುಮ್ಮ, ಅಶೋಕ ಕಮತ, ವಕೀಲರ ಸಂಘದ ಅಧ್ಯಕ್ಷ ಸುಭಾಸಚಂದ್ರ ಪಾಟೀಲ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಶಂಕರ ಗೋರೋಶಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಕೋಶಾಧ್ಯಕ್ಷ ಮಹಾಂತೇಶ ಕುಡಚಿ ಉಪಸ್ಥಿತರಿದ್ದರು. ಎಸ್.ಕೆ.ಮಠದ ನಿರೂಪಿಸಿದರು, ಆರ್.ಎಲ್.ಮಿರ್ಜಿ ವಂದಿಸಿದರು.
ಸಂವಾದ ಕಾರ್ಯಕ್ರಮ: ನಗರದ ಶೂನ್ಯ ಸಂಪಾದನಾ ಮಠದಲ್ಲಿ ಚನ್ನಬಸವೇಶ್ವರ ವಿದ್ಯಾಪೀಠದ ಬಿಸಿಇ ವಿದ್ಯಾರ್ಥಿಗಳೊಂದಿಗೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಭಾನುವಾರ ಸಂವಾದ ನಡೆಸಿದರು. ನ್ಯಾಯಾಧೀಶರಾದ ಉಮೇಶ ಅತನೂರೆ, ಚೈತ್ರಾ ಕುಲಕರ್ಣಿ, ವಕೀಲರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ, ಆಡಳಿತಾಧಿಕಾರಿ ಅಡಿವೇಶ ಗವಿಮಠ, ಅರ್ಪಣಾ ಕುಲಕರ್ಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net