ಯುವಜನರು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಲಿ

ಬೆಲ್ಲದ ಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಖೇತ ಬಚಾವೋ ಅಭಿಯಾನದಲ್ಲಿ ಜಂಟಿ ಉಪಕಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿದರು. ಪವನ ಕತ್ತಿ, ಶ್ರೀಕಾಂತ ಖೇಮಲಾಪುರೆ, ಎಂ.ಎಸ್.ಪಟಗುಂದಿ ಇತರರಿದ್ದರು.
ಬೆಲ್ಲದ ಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ಖೇತ ಬಚಾವೋ ಅಭಿಯಾನದಲ್ಲಿ ಜಂಟಿ ಉಪಕಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿದರು. ಪವನ ಕತ್ತಿ, ಶ್ರೀಕಾಂತ ಖೇಮಲಾಪುರೆ, ಎಂ.ಎಸ್.ಪಟಗುಂದಿ ಇತರರಿದ್ದರು.
Published on
ಹುಕ್ಕೇರಿ: ಕಷಿ ಭೂಮಿ ಕಡಿಮೆಯಾಗಿ ಕೈಗಾರಿಕೆ ಮತ್ತು ಜನವಸತಿ ಪ್ರದೇಶ ನಿರ್ಮಾಣ ಆಗುತ್ತಿವೆ. ಇದೇ ಮುಂದುವರಿದಲ್ಲಿ ಜನರಿಗೆ ಆಹಾರದ ಕೊರತೆ ಕಾಡಲಿದೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಕಳವಳ ವ್ಯಕ್ತಪಡಿಸಿದರು.
ಬೆಲ್ಲದ ಬಾಗೇವಾಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಖೇತ ಬಚಾವೋ ಅಭಿಯಾನದಲ್ಲಿ ಮಾತನಾಡಿದ ಅವರು, ಯುವಜನರು ಕೃಷಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಪ್ರಗತಿಪರ ರೈತ ಸುಧೀರ ಕತ್ತಿ ಮಾತನಾಡಿ, ನೌಕರಿಯ ವೇತನಕ್ಕಿಂತ ಹೆಚ್ಚಿನ ಆದಾಯ ಕೃಷಿಯಲ್ಲಿದೆ. ಆಧುನಿಕ ಸೌಲಭ್ಯ ಬಳಸಿಕೊಂಡು ಬೆಳೆ ಬೆಳೆದರೆ ಹೆಚ್ಚು ಆದಾಯ ಗಳಿಸಲು ಸಾಧ್ಯ. ಜತೆಗೆ ಮಿಶ್ರ ಬೆಳೆಯಿಂದ ಉತ್ತಮ ಹಣ ಪಡೆಯಬಹುದು ಎಂದರು.
ಕೃಷಿ ಇಲಾಖೆ ಜಂಟಿ ಉಪಕೃಷಿ ನಿರ್ದೇಶಕ ಸಹದೇವ ಯರಗೊಪ್ಪ, ಸಹಾಯಕ ಉಪಕೃಷಿ ತಾಲೂಕು ನಿರ್ದೇಶಕ ಎಂ.ಎಸ್.ಪಟಗುಂದಿ ಕೃಷಿಕರಿಗೆ ಸರ್ಕಾರದಿಂದ ದೊರಕುವ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು. ತುಕ್ಕಾನಟ್ಟಿ ಕಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಪರಶುರಾಮ ಪಾಟೀಲ, ಡಾ.ಆದರ್ಶ, ಕಷಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಶ್ರೀಕಾಂತ ಖೆಮಲಾಪುರೆ, ನಿರ್ದೇಶಕ ಮುರಗೇಶ ಮಾಳಗಿ, ಮುಖ್ಯ ಕಾರ್ಯನಿರ್ವಾಹಕ ರವೀಂದ್ರ ಕತ್ತಿ, ಸಮೀರ್ ಲೋಕಾಪುರ, ಶ್ರದ್ಧಾ ಪಾಟೀಲ, ಅಜಿತ ಹೂಲಿಕಟ್ಟಿ, ರೇಣುಕಾ ಕಳಸಪ್ಪಗೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net