ಯುವ ಪೀಳಿಗೆಗೆ ಸಮಯಕ್ಕೆ ಮಹತ್ವ ನೀಡಲಿ

ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಸುಧಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಜರಾಜ ಮುದಕವಿ ಮಾತನಾಡಿದರು. ಗಿರೀಶ ಕುಲಕರ್ಣಿ,  ಪ್ರಹ್ಲಾದಾಚಾರ್ಯ ಜೋಶಿ, ಅಕ್ಷತಾ ಗೊರವ ಇತರರಿದ್ದರು.
ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಸುಧಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಜರಾಜ ಮುದಕವಿ ಮಾತನಾಡಿದರು. ಗಿರೀಶ ಕುಲಕರ್ಣಿ, ಪ್ರಹ್ಲಾದಾಚಾರ್ಯ ಜೋಶಿ, ಅಕ್ಷತಾ ಗೊರವ ಇತರರಿದ್ದರು.
Published on
ರಾಮದುರ್ಗ: ಹಿಂದು ಧಾರ್ಮಿಕ ನಡೆನುಡಿ ಉಳಿಸಿ, ಬೆಳೆಸಿಕೊಂಡು ಹೋಗಲು ಯುವ ಪೀಳಿಗೆಗೆ ಸಂಸ್ಕಾರ ಶಿಬಿರದಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಗಿರೀಶ ಕುಲಕರ್ಣಿ ಹೇಳಿದರು. ನಗರದ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಸುಧಾ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಬಿರದಲ್ಲಿ ಕಲಿತ ವಿಷಯವನ್ನು ಜೀವನಪರ್ಯಂತ ಪಾಲಿಸಿಬೇಕು ಎಂದರು.
ವಕೀಲ ಸಂಘದ ಅಧ್ಯಕ್ಷ ಅಜರಾಜ ಮುದಕವಿ ಮಾತನಾಡಿ, ವಿದ್ಯಾರ್ಥಿ ದಿಶೆಯಲ್ಲಿ ಸಮಯಕ್ಕೆ ಮಹತ್ವ ನೀಡಿ, ಜ್ಞಾನದ ಹುಡುಕಾಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತೊಡಗಿಕೊಳ್ಳಬೇಕು. ನಮ್ಮ ಸನಾತನ ಧರ್ಮ, ಸಂಸ್ಕೃತಿ ರಕ್ಷಿಸಲು ಪ್ರಯತ್ನಿಸಬೇಕು. ಬಾಲ್ಯದಲ್ಲಿ ಸಂಸ್ಕಾರ ಬೆಳೆಸಿಕೊಂಡರೆ ಶ್ರೇಷ್ಠ ಚಿಂತನೆ ಬೆಳೆಸಿಕೊಂಡಂತಾಗುತ್ತದೆ ಎಂದರು. ರಾಮಭಟ್ ದೊಡವಾಡ, ಪ್ರಹ್ಲಾದಾಚಾರ್ಯ ಜೋಶಿ, ಅಕ್ಷತಾ ಗೊರವ, ನಯನಾ ವಾಳ್ವೇಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net