ಯುವ ಜನತೆ ವ್ಯಸನ ಲೋಕದಿಂದ ಹೊರಬರಲಿ

ಬೆಳಗಾವಿ ಬ್ರಹ್ಮಕುಮಾರಿ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಶೆ ಮುಕ್ತ ಜಾಗೃತಿಯ ಪೋಸ್ಟರ್‌ನ್ನು ಕೆ.ಎಂ.ಜಾನಕಿ ಬಿಡುಗಡೆಗೊಳಿಸಿದರು. ಡಿ.ವೈ.ಬಸಾಪುರ, ರೋಹಿಣಿ ಬಸಾಪುರ, ಬ್ರಹ್ಮಕುಮಾರಿ ಅಂಬಿಕಾ, ಮಹಾಂತೇಶ ಹಿರೇಮಠ ಇತರರಿದ್ದರು.
ಬೆಳಗಾವಿ ಬ್ರಹ್ಮಕುಮಾರಿ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ನಶೆ ಮುಕ್ತ ಜಾಗೃತಿಯ ಪೋಸ್ಟರ್‌ನ್ನು ಕೆ.ಎಂ.ಜಾನಕಿ ಬಿಡುಗಡೆಗೊಳಿಸಿದರು. ಡಿ.ವೈ.ಬಸಾಪುರ, ರೋಹಿಣಿ ಬಸಾಪುರ, ಬ್ರಹ್ಮಕುಮಾರಿ ಅಂಬಿಕಾ, ಮಹಾಂತೇಶ ಹಿರೇಮಠ ಇತರರಿದ್ದರು.
Published on

ಬೆಳಗಾವಿ :

ಯುವ ಸಂಪನ್ಮೂಲ ಹೆಚ್ಚು ಹೊಂದಿರುವ ಸಂಪದ್ಭರಿತ ದೇಶ ಭಾರತ. ಹೀಗಾಗಿ, ದೇಶಕ್ಕೆ ಯುವ ಜನತೆಯೇ ದೊಡ್ಡ ಸಂಪತ್ತಾಗಿದ್ದು, ಯುವಕರು ನಶೆ ಲೋಕದಿಂದ ಹೊರಬರಬೇಕಿದೆ. ಇವರ ಆರೋಗ್ಯ ಹಾಗೂ ಬೌದ್ಧಿಕ ವಿಕಸನದ ಜವಾಬ್ದಾರಿ ಸರ್ಕಾರದ ಜತೆಗೆ ಸಾರ್ವಜನಿಕರ ಮೇಲೂ ಇದೆ ಎಂದು ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಹೇಳಿದರು.

ಮಹಾಂತೇಶ ನಗರ ಬ್ರಹ್ಮಕುಮಾರಿ ಜಿಲ್ಲಾ ಕೇಂದ್ರದಲ್ಲಿ ಭಾನುವಾರ ಬ್ರಹ್ಮಕುಮಾರಿ ಜಾಗತಿಕ ಮುಖ್ಯಸ್ಥೆ ದಾದಿ ಪ್ರಕಾಶಮಣಿ 19ನೇ ಪುಣ್ಯತಿಥಿ ನಿಮಿತ್ತ ಆಯೋಜಿಸಿದ್ದ ನಶಾ ಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಮೊದಲೆಲ್ಲ ಕುಡಿತ, ಗುಟ್ಕಾ ಸೇವನೆ, ಜೂಜಾಟದಂತಹ ಕಣ್ಣಿಗೆ ಕಾಣುವ ವ್ಯಸನಗಳಿರುತ್ತಿದ್ದವು. ಈಗ ಕಣ್ಣಿಗೆ ಕಾಣದಂತಹ ಡ್ರಗ್ಸ್, ಗಾಂಜಾ, ಚರಸ್‌ನಂತಹ ಅಪಾಯಕಾರಿ ಸೇವನೆಗಳಲ್ಲಿ ಬಹುಪಾಲು ಯುವಜನತೆ ಸಿಲುಕಿದ್ದಾರೆ. ವಿವಿಧ ಸಾಮಾಜಿಕ ಮಾಧ್ಯಮ, ಮೊಬೈಲ್ ಮತ್ತಿತರ ಡಿವೈಸ್‌ಗಳಿಗೂ ದಾಸರಾಗಿದ್ದಾರೆ. ದಿನವೆಲ್ಲ ರೀಲ್ಸ್ ನೋಡುತ್ತ, ಅಲ್ಲಸಲ್ಲದ ವಿಷಯಗಳನ್ನು ಜಾಲಾಡುತ್ತ, ಆನಲೈನ್ ಗೇಮಿಂಗ್‌ನಲ್ಲಿ ತೊಡಗಿ ಡಿಜಿಟಲ್ ನಶೆಯಲ್ಲಿ ಮುಳುಗಿದ್ದಾರೆ ಎಂದು ಕಳಕಳಿ ವ್ಯಕ್ತಪಡಿಸಿದರು.

ನಿವೃತ್ತ ನ್ಯಾಯಾಧೀಶ ಡಿ.ವೈ.ಬಸಾಪುರ ಮಾತನಾಡಿ, ನಶಾ ಪದಾರ್ಥಗಳ ಪೂರೈಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹುದೊಡ್ಡ ಮಾಫಿಯಾ ನಡೆಯುತ್ತಿದೆ. ಹಣ ಸಂಪಾದನೆಗೆ ಅಕ್ರಮ ದಂಧೆಗಳು ವಿಪರೀತ ನಡೆಯುತ್ತಿದೆ. ಅಂತಾರಾಷ್ಟ್ರೀಯ ಸರ್ಕಾರಗಳು ಇಂತಹ ಮಾಫಿಯಾ ಕಟ್ಟಿಹಾಕಲು ಯತ್ನಿಸುತ್ತಿದ್ದು, ಯುವ ಜನತೆ ಜಾಗೃತರಾಗಬೇಕು ಎಂದು ಹೇಳಿದರು.
ಬೈಲಹೊಂಗಲ ಸಿವಿಲ್ ನ್ಯಾಯಾಧೀಶೆ ರೋಹಿಣಿ ಬಸಾಪುರ ಮಾತನಾಡಿ, ವರ್ತಮಾನದಲ್ಲಿ ಯುವಕ-ಯುವತಿಯರು ನಶೆ ಮಾಡುವುದು ಸಾಮಾನ್ಯವಾಗಿದೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕ ಯುವತಿಯರೇ ನಶೆಯಲ್ಲಿ ಭಾಗಿಯಾದರೆ ಹೇಗೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲುಬು ಮತ್ತು ಕೀಲು ವಿಭಾಗದ ತಜ್ಞ ವೈದ್ಯ ಡಾ.ಅನಿಲ ಪಾಟೀಲ, ಬ್ರಹ್ಮಕುಮಾರೀಸ್ ಜಿಲ್ಲಾ ಮುಖ್ಯಸ್ಥೆ ಅಂಬಿಕಾ, ಬುಡಾ ಮಾಜಿ ಇಂಜಿನಿಯರ ಮಹಾಂತೇಶ ಹಿರೇಮಠ, ಬ್ರಹ್ಮಕುಮಾರಿಗಳಾದ ರಾಜಯೋಗಿನಿ ಮೀರಾ, ವಿದ್ಯಾ, ಮೀನಾಕ್ಷಿ, ಪ್ರತಿಭಾ, ಸುಲೋಚನ, ದೇವಿಕಾ ಇತರರಿದ್ದರು. ಡಾ.ಸಂಗೀತಾ ಬೆಳಗಾವಿಮಠ ಪ್ರಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕುಮಾರಿ ಜ್ಯೋತಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net