ಕೊನೇ ಹಳ್ಳಿವರೆಗೂ ನೀರು ಹರಿಯಲಿ

ಮುಗಳಖೋಡ ಪಟ್ಟಣದ ಘಟಪ್ರಭಾ ಎಡದಂಡೆ ಕಾಲುವೆಗೆ ಅಽಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವೇತಾ ಬಿಡಿಕರ, ಗಿರೀಶ ಸ್ವಾದಿ, ಅನಿಲ ಬಡಿಗೇರ ಇತರರಿದ್ದರು.
ಮುಗಳಖೋಡ ಪಟ್ಟಣದ ಘಟಪ್ರಭಾ ಎಡದಂಡೆ ಕಾಲುವೆಗೆ ಅಽಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವೇತಾ ಬಿಡಿಕರ, ಗಿರೀಶ ಸ್ವಾದಿ, ಅನಿಲ ಬಡಿಗೇರ ಇತರರಿದ್ದರು.
Published on
ಮುಗಳಖೋಡ: ಘಟಪ್ರಭಾ ಎಡದಂಡೆ ಕಾಲುವೆ ನೀರು ಜನ ಹಾಗೂ ಜಾನುವಾರುಗಳಿಗೆ ರಾಯಬಾಗ ತಾಲೂಕಿನ ಕೆಲ ಹಳ್ಳಿಗಳು ಸೇರಿದಂತೆ ರಬಕವಿ, ಬನಹಟ್ಟಿ, ಜಮಖಂಡಿ, ಮುಧೋಳ ಮತ್ತು ಬೀಳಗಿ ತಾಲೂಕಿನವರೆಗೆ ಸಮರ್ಪಕವಾಗಿ ತಲುಪಬೇಕೆಂದು ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬಿಡಿಕರ ಹೇಳಿದರು.
ಬುಧವಾರ ಘಟಪ್ರಭಾ ಎಡದಂಡೆ ಕಾಲುವೆಯಿಂದ ರಬಕವಿ, ಬನಹಟ್ಟಿ ತಾಲೂಕಿನ ಚಿಮ್ಮಡ ಚೌಕಿಯಿಂದ ರಾಯಬಾಗ ತಾಲೂಕಿನ ಮುಗಳಖೋಡ ಚೌಕಿಯವರಿಗೆ ನೀರು ಹರಿವಿನ ಬಗ್ಗೆ ಅಧಿಕಾರಿಗಳ ಜತೆ ಮಾಹಿತಿ ಪಡೆದು ಗೇಟ್ ಪರಿಶೀಲಿಸಿ, ಈ ಭಾಗದ ರೈತರಿಗೆ ಅಷ್ಟೇ ಅಲ್ಲದೆ ಜಮಖಂಡಿ, ಬೀಳಗಿ ತಾಲೂಕಿನ ರೈತರಿಗೂ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ನೀರಿನ ಹರಿವು ಅಗತ್ಯವಿದೆ. ಕಾಲುವೆಯಲ್ಲಿ ಸರಿಯಾಗಿ ನೀರು ಹರಿಯದ ಕಾರಣ ಮಹಾಲಿಂಗಪುರ ಪ್ರಭಾರ ಎಇಇಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದರು.
ಜಮಖಂಡಿ ತಹಸೀಲ್ದಾರ್ ಗಿರೀಶ ಸ್ವಾದಿ, ಮುಧೋಳ ತಹಸೀಲ್ದಾರ್ ಅನಿಲ ಬಡಿಗೇರ, ರಬಕವಿ ಜಿಎಲ್ ಬಿಸಿ ಎಇಇ ಶ್ರೀಧರ ನಂದಿಹಾಳ, ಮಹಾಲಿಂಗಪುರದ ಜಿಎಲ್‌ಬಿಸಿ ಪ್ರಭಾರ ಎಇಇ ಮಹಾಂತೇಶ ಯಡಪ್ಪನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net