ಬೆಂಬಲ ಬೆಲೆ ಯೋಜನೆ ಸದುಪಯೋಗವಾಗಲಿ

ಸವದತ್ತಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಪ್ರಕ್ರಿಯೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ರವೀಂದ್ರ ಯಲಿಗಾರ, ಅಶ್ವತ್ಥ ವೈದ್ಯ, ಬಸವರಾಜ ಹಂಪಣ್ಣವರ ಇತರರಿದ್ದರು.
ಸವದತ್ತಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಪ್ರಕ್ರಿಯೆಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ನೀಡಿದರು. ರವೀಂದ್ರ ಯಲಿಗಾರ, ಅಶ್ವತ್ಥ ವೈದ್ಯ, ಬಸವರಾಜ ಹಂಪಣ್ಣವರ ಇತರರಿದ್ದರು.
Published on
ಸವದತ್ತಿ: ರೈತರ ಪರಿಶ್ರಮಕ್ಕೆ ನ್ಯಾಯಸಮ್ಮತ ಬೆಲೆ ದೊರಕಿಸುವುದು ಸರ್ಕಾರದ ಪ್ರಮುಖ ಗುರಿ. ರೈತರು ಬೆಂಬಲ ಬೆಲೆ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಬಲಿಷ್ಠರಾಗಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ನಗರದ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಕಾರ್ಯಾಲಯದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಖರೀದಿ ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ರೈತರು ಗುಣಮಟ್ಟದ ಕಡಲೆಕಾಳು ಉತ್ಪಾದಿಸಿ, ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಂಡು ಖರೀದಿ ಕೇಂದ್ರಕ್ಕೆ ತರಬೇಕು. ಸರ್ಕಾರ ನಿಗದಿಪಡಿಸಿದ ಪ್ರತಿ ಕ್ವಿಂಟಾಲ್‌ಗೆ 5,875ರೂ. ಬೆಲೆ ರೈತರಿಗೆ ನೆರವಾಗಲಿದೆ ಎಂದು ತಿಳಿಸಿದರು.
ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಯಲಿಗಾರ ಮಾತನಾಡಿ, ಪ್ರತಿ ಎಕರೆಗೆ 4 ಕ್ವಿಂಟಾಲ್ ಹಾಗೂ ಒಬ್ಬ ರೈತನಿಂದ ಗರಿಷ್ಠ 40 ಕ್ವಿಂಟಾಲ್ ವರೆಗೆ ಖರೀದಿ ವ್ಯವಸ್ಥೆ ಕಲ್ಪಿಸಲಾಗಿದೆ. ೆ.7ರಿಂದ ೆ.21ರ ವರೆಗೆ 559 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ಉದ್ಯಮಿ ಅಶ್ವತ್ಥ ವೈದ್ಯ, ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ, ಗಿರೀಶ ಭೀಮರಡ್ಡಿ, ಬಿ.ಎನ್.ಪ್ರಭುನವರ, ಬಸವರಾಜ ಹಂಪನ್ನವರ, ಬಸವರಾಜ ಗುರನ್ನವರ, ಮಲ್ಲಿಕಾರ್ಜುನ ಬೇವೂರ, ಶಂಕರ ಇಟ್ನಾಳ, ಸುರೇಶ ನಾಯ್ಕ, ಸಿ.ವಿ.ದಾಸರ, ಎಂ.ವಿ.ಗದಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net