ಕೃಷಿ ಇಲಾಖೆ ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ

ರೈತ ದಿನಾಚರಣೆ ಅಂಗವಾಗಿ ಬೈಲಹೊಂಗಲದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಗುರು ಮೆಟ್ಟಗುಡ್ಡ, ಎಚ್.ಡಿ.ಕೊಳೇಕರ, ಡಾ.ಮಂಜುನಾಥ ಚೌರಡ್ಡಿ, ಬಸವರಾಜ ದಳವಾಯಿ ಇತರರಿದ್ದರು.
ರೈತ ದಿನಾಚರಣೆ ಅಂಗವಾಗಿ ಬೈಲಹೊಂಗಲದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಗುರು ಮೆಟ್ಟಗುಡ್ಡ, ಎಚ್.ಡಿ.ಕೊಳೇಕರ, ಡಾ.ಮಂಜುನಾಥ ಚೌರಡ್ಡಿ, ಬಸವರಾಜ ದಳವಾಯಿ ಇತರರಿದ್ದರು.
Published on
ರೈತ ದಿನಾಚರಣೆ ಅಂಗವಾಗಿ ಕಷಿ ಇಲಾಖೆ, ಕಷಿಕ ಸಮಾಜ ಹಾಗೂ ಸೋಮೇಶ್ವರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ತಾಪಂ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಬ್ಬಿನ ಬೆಳೆಯಲ್ಲಿ ಸಮಗ್ರ ನೀರು ಮತ್ತು ಮಣ್ಣು ನಿರ್ವಹಣೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಕಷಿಕ ಸಮಾಜ ರೈತರಿಗೆ ಎಲ್ಲ ಯೋಜನೆಯ ಜಾಗತಿ ಮೂಡಿಸುವಲ್ಲಿ ಸನ್ನದ್ಧವಾಗಿದೆ. ಇಲಾಖೆ ರೈತರ ಸೇವೆಯಲ್ಲಿ ತಲ್ಲೀಣವಾಗಿದೆ ಎಂದರು.
ಕೃಷಿಇಲಾಖೆ ಜಂಟಿ ಕಷಿ ನಿರ್ದೇಶಕ ಎಚ್.ಡಿ.ಕೊಳೇಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಬ್ಬಿನ ಕೃಷಿಯಲ್ಲಿ ಸುಧಾರಿತ ಕ್ರಮ ಅನುಸರಿಸಿ ಪ್ರಗತಿಪರ ರೈತರ ಮಾರ್ಗದರ್ಶನದಂತೆ ಸಮಗ್ರ ಕಷಿ ಕೈಗೊಂಡು ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬೇಕು ಎಂದರು. ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಾಳಪ್ಪ ಬೆಳಕೊಡ ಕಬ್ಬಿನಲ್ಲಿ ಎಕರೆಗೆ 130 ಟನ್ ಇಳುವರಿ ಪಡೆದ ತಮ್ಮ ಯಶೋಗಾಥೆ ವಿವರಿಸಿದರು.
ಕೆವಿಕೆ ಮತ್ತಿಕೊಪ್ಪ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಮಾತನಾಡಿ, ಕಬ್ಬು ನಾಟಿಗೆ ಜುಲೈದಿಂದ ಜನವರಿ 30ರ ವರೆಗೆ ತಳಿಗಳಿಗೆ ಅನುಗುಣವಾಗಿ ಉತ್ತಮ ಬೀಜ ಆಯ್ಕೆ ಮಾಡಿಕೊಂಡು ನಾಟಿ ಮಾಡಬಹುದಾಗಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಸಾಗುವಳಿ ಮಾಡಿ ಉತ್ತಮ ಇಳುವರಿ ಪಡೆಯಬಹುದು ಎಂದರು.
ಸೋಮೇಶ್ವರ ಸಕ್ಕರೆ ಕಾರ್ಖಾನೆ ಕಬ್ಬು ಅಭಿವದ್ಧಿ ಅಧಿಕಾರಿ ಅನಿಲಕುಮಾರ ಮುಗಳಖೋಡ ಅವರು ಕಬ್ಬಿನ ಬೆಳೆಯಲ್ಲಿ ಮಣ್ಣಿನ ಆರೋಗ್ಯ ಹಾಗೂ ನೀರಿನ ಸದ್ಬಳಕೆ ಕುರಿತು ರೈತರು ಜಾಗತರಾಗಲು ತಿಳಿಸಿದರು.
ಸಹಾಯಕ ಕಷಿ ನಿರ್ದೇಶಕ ಬಸವರಾಜ ದಳವಾಯಿ ಸ್ವಾಗತಿಸಿದರು. ಉಪ ಕಷಿ ನಿರ್ದೇಶಕ ಸಲೀಂ ಸಂಗತ್ರಾಸ, ಕಷಿಕ ಸಮಾಜದ ಉಪಾಧ್ಯಕ್ಷ ಶಂಕರಗೌಡ ದೊಡ್ಡಗೌಡ್ರ, ಜಿಲ್ಲಾ ಪ್ರತಿನಿಧಿ ನಾಗನಗೌಡ ಭರಮಗೌಡ್ರ, ಪ್ರಧಾನ ಕಾರ್ಯದರ್ಶಿ ಶಿವಬಸಪ್ಪ ತುರುಮುರಿ, ಖಜಾಂಚಿ ಶಿವಪುತ್ರಪ್ಪ ತಟವಟಿ, ಸದಸ್ಯರಾದ ಬಸವರಾಜ ಶಿಂತ್ರಿ, ಶರಣಬಸಪ್ಪ ಮೆಟಗುಡ್ಡ ಇತರರು ಇದ್ದರು.
ಆತ್ಮಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ರೈತರನ್ನು ಹಾಗೂ ತಾಲೂಕಿನಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬೆಳೆ ಸಮೀಕ್ಷೆ ಖಾಸಗಿ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು. ಆಯ್ದ ರೈತರಿಗೆ ಕಷಿ ಭಾಗ್ಯ ಯೋಜನೆಯ ಕಾರ್ಯದೇಶ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net