ವಿದ್ಯಾರ್ಥಿಗಳು ಮಾದರಿ ಫಲಿತಾಂಶ ಪಡೆಯಲಿ

ತೆಲಸಂಗ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ಉಚಿತವಾಗಿ ವಿತರಿಸಲಾಯಿತು. ಯುವ ಮುಖಂಡ ಚಿದಾನಂದ ವಸದಿ, ಸುರೇಶ ಸನಗೊಂಡ, ಎನ್.ಡಿ.ಅತ್ತಾರ್, ದಾನಪ್ಪ ಹತ್ತಿ ಇತರರು ಇದ್ದರು.
ತೆಲಸಂಗ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ಉಚಿತವಾಗಿ ವಿತರಿಸಲಾಯಿತು. ಯುವ ಮುಖಂಡ ಚಿದಾನಂದ ವಸದಿ, ಸುರೇಶ ಸನಗೊಂಡ, ಎನ್.ಡಿ.ಅತ್ತಾರ್, ದಾನಪ್ಪ ಹತ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಚಿದಾನಂದ ಸವದಿ ಆಶಯ
  • ಪರೀಕ್ಷಾ ಸಾಮಗ್ರಿ ಕೊಡುಗೆ
ತೆಲಸಂಗ: ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಭಾವಂತ ಮಕ್ಕಳ ಬೆನ್ನಿಗೆ ಸವದಿ ಕುಟುಂಬ ಸದಾ ನಿಲ್ಲುತ್ತದೆ ಎಂದು ಯುವ ಮುಖಂಡ ಚಿದಾನಂದ ಸವದಿ ಹೇಳಿದರು.
ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೋಮವಾರ ಪರೀಕ್ಷಾ ಸಾಮಗ್ರಿ ಉಚಿತವಾಗಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಥಣಿ ತಾಲೂಕಿನಾದ್ಯಂತ ಈ ವರ್ಷ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ವಿತರಿಸುವ ಗುರಿ ಹೊಂದಲಾಗಿದೆ. ಕಷ್ಟದಲ್ಲಿದ್ದವರು ನಮ್ಮನ್ನು ಸಂಪರ್ಕಿಸಬಹುದು. ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ತೊಂದರೆ ಇದ್ದಲ್ಲಿ ವೈಯಕ್ತಿಕವಾಗಿ ಸಹಾಯ ಮಾಡಲು ಸಿದ್ಧರಿದ್ದೇವೆ. ಜಿಲ್ಲೆಗೆ ಮಾದರಿಯಾಗುವಂತೆ ಲಿತಾಂಶ ತರಬೇಕು ಎಂದರು.
ಪ್ರಾಚಾರ್ಯ ಸುರೇಶ ಸನಗೊಂಡ, ಹಿರಿಯ ಶಿಕ್ಷಕ ಎನ್. ಡಿ.ಅತ್ತಾರ, ದಾನಪ್ಪ ಹತ್ತಿ, ತಾಪಂ ಮಾಜಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಧರೆಪ್ಪ ಮಾಳಿ, ಮಹಾದೇವ ಬಾಣಿ, ಗುಂಡುಬಾ ಪವಾರ, ಸಂದೀಪ ಉಂಡೋಡಿ, ಸಂಜು ಮಾದರ, ಸಿದ್ದಲಿಂಗ ಮಾದರ, ರಾಮು ನಿಡೋಣಿ, ಉಮೇಶ ಸೂರ್ಯವಂಶಿ, ಬುಡ್ಡಾ ಮುಜಾವರ್, ಆನಂದ ಥೈಕಾರ, ಸಚಿನ ಸಾವಂತ, ಸುರೇಶ ಖೊಳಂಬಿ, ಅಪ್ಪು ಜಮಾದರ್, ಸುನೀಲ ಮಾದರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net