ಪೊಲೀಸ್ ಠಾಣೆಗಳು ಭರವಸೆಯ ಬೆಳಕಾಗಲಿ

ಕಾಗವಾಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ನಾಗಲಕ್ಷ್ಮೀ ಚೌಧರಿ, ಚಿದಾನಂದ ಸವದಿ, ರವೀಂದ್ರ ಹಾದಿಮನಿ ಇತರರಿದ್ದರು.
ಕಾಗವಾಡ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ನಾಗಲಕ್ಷ್ಮೀ ಚೌಧರಿ, ಚಿದಾನಂದ ಸವದಿ, ರವೀಂದ್ರ ಹಾದಿಮನಿ ಇತರರಿದ್ದರು.
Published on
ಕಾಗವಾಡ: ಮಹಿಳೆಯರಿಗೆ ಪೊಲೀಸ್ ಠಾಣೆಗಳು ಭಯ ಹುಟ್ಟಿಸುವ ಕೇಂದ್ರವಾಗದೇ ನ್ಯಾಯ ಒದಗಿಸುವ ಭರವಸೆಯ ಬೆಳಕಾಗಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಪಟ್ಟಣದ ಕನ್ನಡ ಮಾತಾ ೌಂಡೇಶನ್ 3ನೇ ವಾರ್ಷಿಕೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ಜಾಗೃತಿ ಜ್ಯೋತಿ ಬೆಳಗಲಿ ಸಮಾಜದ ಭವಿಷ್ಯ ಅರಳಲಿ’ ಎಂಬ ಮಹಿಳೆಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ಕಾಗವಾಡ ಬಸ್ ನಿಲ್ದಾಣ ಆರೋಗ್ಯ ಕೇಂದ್ರ, ಪಟ್ಟಣದಲ್ಲಿ ಮೂಲ ಸೌಕರ್ಯಗಳ ಕುರಿತು ಸಮಸ್ಯೆ ಹೇಳಿಕೊಂಡರು. ಸ್ಥಳದಲ್ಲಿಯೇ ಸ್ಪಂದಿಸಿದ ಅವರು, ಅಲ್ಲಿದ್ದ ಅಧಿಕಾರಿಗಳಿಗೆ ಮಹಿಳೆಯರ ಸಮಸ್ಯೆಗಳಿಗೂ ಸ್ಪಂದಿಸಿ, ಪರಿಹಾರ ನೀಡಬೇಕು ಮತ್ತು ಅದರ ಕುರಿತು ನನಗೆ ಲಿಖಿತ ಮಾಹಿತಿ ನೀಡಬೇಕೆಂದು ಸೂಚಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಹಿಳೆಯರ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಸೂಚಿಸಿದರು.
ಬಸ್ ನಿಲ್ದಾಣ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವ ಮುಖಂಡ ಚಿದಾನಂದ ಸವದಿ, ತಹಸೀಲ್ದಾರ್ ರವೀಂದ್ರ ಹಾದಿಮನಿ, ತಾಪಂ ಇಒ ವೀರಣ್ಣ ವಾಲಿ, ಸಿಡಿಪಿಒ ಸಂಜೀವಕುಮಾರ ಸದಲಗೆ, ಡಾ.ಬಸನಗೌಡ ಕಾಗೆ, ವೆಂಕಟೇಶ ಕುಲಕರ್ಣಿ, ಅಣ್ಣಾಸಾಬ ಕೋರೆ, ದಲಿತ ಮುಖಂಡ ಸಂಜಯ ತಳವಳಕರ, ಜ್ಯೋತಿಕುಮಾರ ಪಾಟೀಲ, ವಿನಾಯಕ ಚೌಗುಲೆ, ರವಿ ಕಾಂಬಳೆ, ಪೂಜಾ ಕಾಂಬಳೆ, ಸಿದ್ದು ಒಡೆಯರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net