ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಹೆಚ್ಚಲಿ

ಗೀತ ಗಾಯನ ಸ್ಪರ್ಧೆಯಲ್ಲಿ ಗಜಾನನ ಮನ್ನಿಕೇರಿ ಮಾತನಾಡಿದರು. ಆಂಜನೇಯ, ಆರ್.ಡಿ.ಹಿರೇಮಠ, ಜುನೇದಿ ಪಟೇಲ್ ಇತರರಿದ್ದರು.
ಗೀತ ಗಾಯನ ಸ್ಪರ್ಧೆಯಲ್ಲಿ ಗಜಾನನ ಮನ್ನಿಕೇರಿ ಮಾತನಾಡಿದರು. ಆಂಜನೇಯ, ಆರ್.ಡಿ.ಹಿರೇಮಠ, ಜುನೇದಿ ಪಟೇಲ್ ಇತರರಿದ್ದರು.
Published on
ಬೆಳಗಾವಿ: ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಹೆಚ್ಚಾಗಬೇಕು. ದೇಶ ಕಟ್ಟುವ ಕಲಿಗಳಾಗಬೇಕು ಎಂದು ಕರ್ನಾಟಕ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಹೇಳಿದರು.
ನಗರದ ಟಿಳಕವಾಡಿಯ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಗುರುವಾರ ಜಿಲ್ಲಾಮಟ್ಟದ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಗ್ರಾಮೀಣ ವಲಯದ ಬಿಇಒ ಆಂಜನೇಯ ಮಾತನಾಡಿ, ಕರ್ನಾಟಕ ಹಾಗೂ ಬೆಳಗಾವಿಯಲ್ಲಿ ಸ್ಕೌಟ್ಸ್ ಅಭಿಯಾನ ಹೆಚ್ಚಿಸುವಲ್ಲಿ ಗಜಾನನ ಮನ್ನಿಕೇರಿ ಅವರ ಪಾತ್ರ ಮಹತ್ವದ್ದಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಜಾತಿ, ಧರ್ಮ ಭೇದವಿಲ್ಲದ ಸಂಸ್ಥೆ. ಇದು ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ, ನಾಯಕತ್ವ, ಶಿಸ್ತು, ಸಂಸ್ಕೃತಿ, ಸಾಮಾಜಿಕ ಜವಾಬ್ದಾರಿ ಬೆಳೆಸಿ ಉತ್ತಮ ನಾಗರಿಕರನ್ನಾಗಿ ರೂಪಿಸುತ್ತದೆ ಎಂದರು.
ಬೆಳಗಾವಿ ನಗರ ಬಿಆರ್‌ಸಿ ಆರ್.ಡಿ.ಹಿರೇಮಠ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ದೈಹಿಕ ಶಿಕ್ಷಣ ಅಧೀಕ್ಷಕ ಜುನೇದಿ ಪಟೇಲ್ ಮಾತನಾಡಿದರು. 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಕೆನರಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ದಿಲೀಪ ಮಾಳಗಿ, ಶುಭಾಂಗಿ ಕಾರೇಕರ, ಬಿ.ಎಂ.ಹಳ್ಳೂರ, ಎನ್.ಜಿ.ಪಾಟೀಲ, ರಾಜಕುಮಾರ ಕುಂಬಾರ, ಸಿ.ಎಸ್.ಹಿರೇಮಠ, ವಿ.ಎಸ್.ಬೀಳಗಿ, ವೈಶಾಲಿ ಅಳಗುಂಡಿ, ಪ್ರಭಾವತಿ ಮಾನೆ, ಸುನಿತಾ ಕಾವಳೆ, ಜಯಶ್ರೀ ಪತ್ತಾರ, ಮಹಾನಂದಾ ಬಾಳನ್ನವರ, ಶ್ರೀಧರ ಬಿಸಿಲಾಪೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net