ಖಾನಾಪುರ: ತಾಲೂಕಿನ ಕಾಡಂಚಿನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿರುವ ಹಕ್ಕಿಪಿಕ್ಕಿ ಆದಿವಾಸಿ ಸಮುದಾಯ ಮತ್ತು ಕಾತ್ಕರಿ ಜನಾಂಗದವರಿಗೆ ಚುನಾವಣೆ ಗುರುತಿನ ಚೀಟಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟಿಸಲಾಯಿತು.
ಹಕ್ಕಿ ಪಿಕ್ಕಿ ಹಾಗೂ ಕಾತ್ಕರಿ ಸಮುದಾಯದವರನ್ನು ಕಾಡಿನಿಂದ ಒಕ್ಕಲೆಬ್ಬಿಸಲಾಗಿದೆ. ಇವರಿಗೆ ಮೂಲ ಸೌಕರ್ಯ ಒದಗಿಸಬೇಕು. ಮನೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು. ಎನ್.ಶಂಕರ, ವಿಠ್ಠಲ ಸಗರಮನ್ನವರ, ದುರ್ಗಪ್ಪ ದಂಡಿನ್ನವರ, ರಾಜಶೇಖರ ಹಿಮಡಲಗಿ ಇತರರಿದ್ದರು.