ಕಲಿಕೆ ಸಂತೋಷದ ಚಟುವಟಿಕೆಯಾಗಲಿ

ಹಿರೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಗ್ರಾಪಂ ಅಧ್ಯಕ್ಷೆ ಮಿರಾಜಬಿ ಮಿರ್ಜಿ ಉದ್ಘಾಟಿಸಿದರು. ಎ.ಎ.ಖಾಜಿ, ಸಿಆರ್‌ಸಿ ನಾಗೇಶ ಹೊನ್ನಳ್ಳಿ, ಕೀರಪ್ಪ ಚಂದರಗಿ ಇತರರಿದ್ದರು.
ಹಿರೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಗ್ರಾಪಂ ಅಧ್ಯಕ್ಷೆ ಮಿರಾಜಬಿ ಮಿರ್ಜಿ ಉದ್ಘಾಟಿಸಿದರು. ಎ.ಎ.ಖಾಜಿ, ಸಿಆರ್‌ಸಿ ನಾಗೇಶ ಹೊನ್ನಳ್ಳಿ, ಕೀರಪ್ಪ ಚಂದರಗಿ ಇತರರಿದ್ದರು.
Published on
ಸಮೀಪದ ಹಿರೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶಿಂದೋಗಿ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿರುವ ಸೃಜನಾತ್ಮಕತೆ ಹೊರತರಲು ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಶ ಹೊನ್ನಳ್ಳಿ ಮಾತನಾಡಿ, ಓದಿನಲ್ಲಿ ಹಿಂದುಳಿದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿ ಪ್ರೋತ್ಸಾಹ ತುಂಬುವುದೇ ಕಲಿಕಾ ಹಬ್ಬದ ಮುಖ್ಯ ಉದ್ದೇಶ ಎಂದರು.
ಗ್ರಾಪಂ ಅಧ್ಯಕ್ಷೆ ಮಿರಾಜಬಿ ಮಿರ್ಜಿ, ಬೆಳಗಾವಿ ಡಯಟ್ ಉಪನ್ಯಾಸಕ ಎಂ.ಆರ್.ಬೇವಿನಗಿಡದ, ಶಿಕ್ಷಣ ಸಂಯೋಜಕ ಸುಧೀರ ವಾಗೇರಿ, ಗ್ರಾಪಂ ಸದಸ್ಯ ಕೀರಪ್ಪ ಚಂದರಗಿ, ಮೌಲಾಸಾಬ್ ಧಾರವಾಡ, ಶ್ವೇತಾ ಬಿಜಗುಪ್ಪಿ, ಸಿದ್ದಪ್ಪ ಮರಕುಂಬಿ, ಶಿವಪ್ಪ ಬಿಜಗುಪ್ಪಿ, ಪಾಂಡು ನಾಯ್ಕರ, ಕೀರಪ್ಪ ಬಸಲಿಗುಂದಿ, ಐ.ಪಿ.ಕಿತ್ತೂರ, ಉಮೇಶ ನಾಗಪ್ಪಗೋಳ, ಎಚ್.ಇ.ಗದಿಗೆನ್ನವರ, ಎಂ.ಎಂ.ಮುರನಾಳ, ಜಿ.ಎಸ್.ಚಿಪ್ಪಲಕಟ್ಟಿ, ಎಸ್.ವೈ.ನಿಪ್ಪಾಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net