ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮೇರು ದಿಗ್ಗಜರು ಕನ್ನಡ ಸಾಹಿತ್ಯ ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಸಮುದ್ರವಿದ್ದಂತೆ. ಸಾಹಿತಿಗೆ ಸಾವಿರಾರು ಜನರನ್ನು ಬಡಿದೆಬ್ಬಿಸುವ ಶಕ್ತಿಯಿದೆ. ಕನ್ನಡ ಭಾಷೆ ಭಾರತ ಅಲ್ಲದೇ ವಿದೇಶದಲ್ಲಿಯೂ ಕಂಪು ಸೂಸುತ್ತಿದೆ. ಆ ಶಕ್ತಿ ಕನ್ನಡ ಭಾಷೆಗಿದೆ ಎಂದರು.