ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಲಿ

ಅಥಣಿಯ ಆದರ್ಶ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಗುರು ಅಳ್ಳಿಮಟ್ಟಿ ಅವರನ್ನು ಮರುಳಸಿದ್ಧ ಸ್ವಾಮೀಜಿ ಸನ್ಮಾನಿಸಿದರು. ರಾವಸಾಹೇಬ ಐಹೊಳೆ, ವಿದ್ಯಾ ಐಹೊಳೆ, ಸತೀಶ ಕುಲಕರ್ಣಿ, ವೈಭವ ಐಹೊಳೆ ಇತರರಿದ್ದರು.
ಅಥಣಿಯ ಆದರ್ಶ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಗುರು ಅಳ್ಳಿಮಟ್ಟಿ ಅವರನ್ನು ಮರುಳಸಿದ್ಧ ಸ್ವಾಮೀಜಿ ಸನ್ಮಾನಿಸಿದರು. ರಾವಸಾಹೇಬ ಐಹೊಳೆ, ವಿದ್ಯಾ ಐಹೊಳೆ, ಸತೀಶ ಕುಲಕರ್ಣಿ, ವೈಭವ ಐಹೊಳೆ ಇತರರಿದ್ದರು.
Published on
ಅಥಣಿ: ಅಕ್ಷರಭ್ಯಾಸ ಮಕ್ಕಳ ಬದುಕಿಗೆ ಬೆಳಕಾಗಿದ್ದು, ಅವರ ಭವಿಷ್ಯ ನಿರ್ಮಾಣ ವಿದ್ಯೆಯಿಂದ ಸಾಧ್ಯ ಎಂದು ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಆದರ್ಶ ಕನ್ನಡ ಮಾಧ್ಯಮ ಶಾಲೆಯಲ್ಲಿ 2026-27ನೇ ಸಾಲಿನಲ್ಲಿ ಸೇರ್ಪಡೆಯಾದ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಸೋಮವಾರ ಹಮ್ಮಿಕೊಂಡಿದ್ದ ಅಕ್ಷರಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರು, ಶಿಕ್ಷಕರು ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಪ್ರೋತ್ಸಾಹ, ಪ್ರೇರಣೆ ನೀಡಿ ಉತ್ತಮ ಪ್ರಜೆಗಳನ್ನಾಗಿಸಬೇಕು. ಅವರಿಂದ ದೇಶದ ಸಮೃದ್ಧಿಗೆ ಕೊಡುಗೆ ಸಿಗುವಂತೆ ಮೌಲಿಕ ಸಂಸ್ಕಾರ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತ ಶಿಕ್ಷಣ ನೀಡಬೇಕು ಎಂದರು.
ಶಾಲೆ ಅಧ್ಯಕ್ಷ ರಾವಸಾಹೇಬ ಐಹೊಳೆ ಮಾತನಾಡಿ, ುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ನುರಿತ ಅನುಭವಿ ಶಿಕ್ಷಕರು ಇದ್ದಾರೆ ಮತ್ತು ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯ ಮತ್ತು ಕಲಿಕಾ ಸಾಮಗ್ರಿಗಳ ಮೂಲಕ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ವಿದ್ಯಾ ಐಹೊಳೆ, ವೈಭವ ಐಹೊಳೆ, ಮುಖ್ಯಶಿಕ್ಷಕ ಸತೀಶ ಕುಲಕರ್ಣಿ, ಗುರು ಅಳ್ಳಿಮಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net