ಎಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸಲಿ

ಉಗರಗೋಳ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ನಾಗರಾಜ ಬಡೆಪ್ಪನವರ, ಮಹಾಂತೇಶ ಮಲ್ಲಾಡ, ರವಿ ಬುಳ್ಳನವರ, ಉಮೇಶ ಬುಳ್ಳನ್ನವರ ಇತರರಿದ್ದರು.
ಉಗರಗೋಳ ಗ್ರಾಮದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ನಾಗರಾಜ ಬಡೆಪ್ಪನವರ, ಮಹಾಂತೇಶ ಮಲ್ಲಾಡ, ರವಿ ಬುಳ್ಳನವರ, ಉಮೇಶ ಬುಳ್ಳನ್ನವರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಾಜ ಬಡೆಪ್ಪನವರ ಅಭಿಮತ
  • ಡಾ.ಅಂಬೇಡ್ಕರ್ ಜಯಂತಿ
ಉಗರಗೋಳ: ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ತತ್ತ್ವಾದರ್ಶ ಪಾಲಿಸಿ ಮುನ್ನಡೆದರೆ ಸದೃಢ ರಾಷ್ಟ್ರ ನಿರ್ಮಿಸಲು ಸಾಧ್ಯ ಎಂದು ಉಗರಗೋಳ ಭೂ ನ್ಯಾಯಮಂಡಳಿ ಸದಸ್ಯ ನಾಗರಾಜ ಬಡೆಪ್ಪನವರ ಹೇಳಿದರು.
ಗ್ರಾಮದಲ್ಲಿ ಗುರುವಾರ ಡಾ.ಬಿ.ಆರ್.ಅಂಬೇಡ್ಕರ್ 139ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಯಲ್ಲಿ ಮಾತನಾಡಿ, ವೈಯಕ್ತಿಕ ಹಿತಾಶಕ್ತಿಗಿಂತ ದೇಶದ ಹಿತಾಶಕ್ತಿ ಮುಖ್ಯ. ಎಲ್ಲರೂ ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದರು.
ಮಹಾಂತೇಶ ಮಲ್ಲಾಡ ಮಾತನಾಡಿದರು. ಮಂಗಳೂರಿನ ಕಲಾ ಸಂಘದ ಕರಡಿ ಮಜಲಿನ ನೋಟ ಕೆಳುಗರ ಮನ ಸೂರೆಗೊಂಡಿತು. ರವಿ ಬುಳ್ಳನವರ, ಉಮೇಶ ಬುಳ್ಳನ್ನವರ, ರಾಮು ಹಿರೇಕುಂಬಿ, ಮಹೇಶ ಕೆಳಗಡೆ, ಮಂಜು ಬುಳ್ಳನ್ನವರ, ಪ್ರಲ್ಹಾದ ಕೆಳಗಡೆ, ಶೆಟ್ಟೆಪ್ಪ ಮಲ್ಲಾಡ, ರಮೇಶ ಬುಳ್ಳನ್ನವರ, ಯಲ್ಲಪ್ಪ ಹಿರೇಕುಂಬಿ, ಸಿದ್ಧಾರೂಢ ಬುಳ್ಳನ್ನವರ, ಕೀರಪ್ಪ ಬುಳ್ಳನ್ನವರ, ಚಂದ್ರಶೇಖರ ಹಿರೇಕೆಂಚನ್ನವರ, ಬಸು ಮೂತ್ತೂರ, ವಾಸು ಗಾಂಜಿ, ಜೋಗಿ ಕೆಳಗಡೆ, ರುದ್ರಪ್ಪ ಬುಳ್ಳನವರ, ಸುಭಾಸ ಬೆಟಗೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net