ಪ್ರತಿಯೊಬ್ಬರೂ ಸ್ವಯಂ ಗಣತಿಗೆ ಆದ್ಯತೆ ನೀಡಲಿ

ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರ ವನ್ನು ಪುರಸಭೆ ಅಧ್ಯಕ್ಷ  ಈಶ್ವರ ಕರೀಕಟ್ಟಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ಹೆಗ್ಗನ್ನವರ, ಡಿ.ಡಿ.ಕಿನ್ನೂರಿ, ಎಂ.ಎಂ.ತಿಮ್ಮಾಣಿ, ಅನಿಲ ಗಿಡ್ನಂದಿ ಇತರರಿದ್ದರು.
ಮುನವಳ್ಳಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರ ವನ್ನು ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಉದ್ಘಾಟಿಸಿದರು. ಮಲ್ಲಿಕಾರ್ಜುನ ಹೆಗ್ಗನ್ನವರ, ಡಿ.ಡಿ.ಕಿನ್ನೂರಿ, ಎಂ.ಎಂ.ತಿಮ್ಮಾಣಿ, ಅನಿಲ ಗಿಡ್ನಂದಿ ಇತರರಿದ್ದರು.
Published on
ಮುನವಳ್ಳಿ: ಜನಗಣತಿ ಅತ್ಯಂತ ಮಹತ್ವದ್ದಾಗಿದ್ದು ಸಾರ್ವಜನಿಕರು ಹಾಗೂ ಗಣತಿದಾರರು ಸಕ್ರಿಯವಾಗಿ ಪಾಲ್ಗೊಂಡು ಸ್ವಯಂ ಗಣತಿಗೆ ಆದ್ಯತೆ ನೀಡಬೇಕು ಎಂದು ಮಲ್ಲಿಕಾರ್ಜುನ ಹೆಗ್ಗನ್ನವರ ಹೇಳಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿನ ಜನಗಣತಿ 2027ರ ಹಿನ್ನೆಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ, ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ, ಅನಿಲ ಗಿಡ್ನಂದಿ, ಕ್ಷೇತ್ರ ತರಬೇತುದಾರರಾದ ಚಿದಾನಂದ ಬಾರ್ಕಿ, ಎ್.ಜಿ. ನವಲಗುಂದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net