ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಗಲಿ

ಹಾರೂಗೇರಿಯ ಎಸ್.ಎಂ.ನಾರಗೊಂಡ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಗಿರೀಶ ನಾರಗೊಂಡ, ಶ್ರೀಶೈಲ ನಾರಗೊಂಡ, ವಿವೇಕ ನಾರಗೊಂಡ ಇತರರಿದ್ದರು.
ಹಾರೂಗೇರಿಯ ಎಸ್.ಎಂ.ನಾರಗೊಂಡ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಡಾ.ಗಿರೀಶ ನಾರಗೊಂಡ, ಶ್ರೀಶೈಲ ನಾರಗೊಂಡ, ವಿವೇಕ ನಾರಗೊಂಡ ಇತರರಿದ್ದರು.
Published on
ಹಾರೂಗೇರಿ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಜತೆಗೆ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಚಿಕ್ಕ ಮಕ್ಕಳ ತಜ್ಞ ಡಾ.ಗಿರೀಶ ನಾರಗೊಂಡ ಹೇಳಿದರು.
ಎಸ್.ಎಂ.ನಾರಗೊಂಡ ಸಿಬಿಎಸ್‌ಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಶ್ರೀಶೈಲ ನಾರಗೊಂಡ ಮಾತನಾಡಿ, ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಬೆಳೆಸಿಕೊಂಡಾಗ ಮಾತ್ರ ಮಕ್ಕಳು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.
ಸಂಸ್ಥೆ ಅಧ್ಯಕ್ಷ ವಿವೇಕ ನಾರಗೊಂಡ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದೇ ಸಂಸ್ಥೆಯ ಪ್ರಮುಖ ಧ್ಯೇಯ ಎಂದರು. ನಂತರ ವಿದ್ಯಾರ್ಥಿಗಳಿಂದ ಸಾಮಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಸ್ಥೆ ನಿರ್ದೇಶಕರಾದ ಗೀತಾ ನಾರಗೊಂಡ, ತ್ರಿವೇಣಿ ನಾರಗೊಂಡ, ಪ್ರಾಚಾರ್ಯ ಪ್ರಶಾಂತ ಎಲ್.ಎಚ್., ಡಾ.ಮಹಾಂತೇಶ ಜಲಗೇರಿ, ಲಕ್ಷ್ಮೀ ಜಲಗೇರಿ ಇತರರಿದ್ದರು. ಹರಿಣಿ ಘೋರ್ಪಡೆ ಸ್ವಾಗತಿಸಿದರು. ಪೂರ್ವಿಕಾ ದಳವಾಯಿ ಹಾಗೂ ನಿಹಾರಿಕಾ ಚೌಗಲಾ ನಿರೂಪಿಸಿದರು. ಶಮಿತ್ ಹೊಸಪೇಟಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net