ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಲಿ

ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಬಸವರಾಜ ಪಣದಿ, ಲಖನ ಚಂದರಗಿ, ಮಾರುತಿ ತಳವಾರ, ರಾಮಣ್ಣ ಮುಧೋಳ ಇತರರಿದ್ದರು.
ಬೆಟಗೇರಿ ಗ್ರಾಪಂ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಜರುಗಿತು. ಬಸವರಾಜ ಪಣದಿ, ಲಖನ ಚಂದರಗಿ, ಮಾರುತಿ ತಳವಾರ, ರಾಮಣ್ಣ ಮುಧೋಳ ಇತರರಿದ್ದರು.
Published on
ಬೆಟಗೇರಿ:
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಅರಿವು ಕೇಂದ್ರದಲ್ಲಿ ಏ.8ರಿಂದ ಮೇ 24ರವರೆಗೆ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಇಂದಿನ ಯುಗದಲ್ಲಿ ಶಾಲಾ ಮಕ್ಕಳು ಓದುವ ಹವ್ಯಾಸದ ಜತೆಗೆ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಲಖನ ಚಂದರಗಿ ಮಾತನಾಡಿ, ಜ್ಞಾನ ಸಂಪತ್ತಿಗಿಂತ ಇನ್ನೊಂದು ಸಂಪತ್ತಿಲ್ಲ. ನಾವು ಕಷ್ಟಪಟ್ಟು ಸಂಪಾದಿಸಿದ ಆಸ್ತಿ, ಅಂತಸ್ತು ನಶಿಸಿ ಹೋಗಬಹುದು, ಜ್ಞಾನ ಎಂದು ನಶಿಸಿ ಹೋಗುವುದಿಲ್ಲ. ವಿದ್ಯಾರ್ಥಿಗಳು ಶಾಲಾ ಬಿಡುವಿನ ವೇಳೆಯಲ್ಲಿ ಉತ್ತಮ ಪುಸ್ತಕ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಪುಸ್ತಕ ಓದಬೇಕು ಎಂದರು.
ಗ್ರಾಪಂ ಕಾರ್ಯದರ್ಶಿ ಮಾರುತಿ ತಳವಾರ, ರಾಮಣ್ಣ ಮುಧೋಳ, ವಿಠ್ಠಲ ಕೋಣಿ, ಸಿದ್ಧಾರೂಢ ಸವತಿಕಾಯಿ, ಮಣಿಕಂಠ ಐದುಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net