ಚಿರತೆ ಪತ್ತೆ, ಆತಂಕ

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ
Published on
ರಾಮದುರ್ಗ: ತಾಲೂಕಿನ ಕೊಳಚಿ ಡ್ಯಾಂ, ಇಡಗಲ್ಲ ಗ್ರಾಮದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿದ್ದು, ಕೊಳಚಿ ಡ್ಯಾಂ, ಕೊಳಚಿ ಗ್ರಾಮ, ಘಟಕನೂರ, ಇಡಗಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಭೀತಿ ಸೃಷ್ಟಿಯಾಗಿದೆ.
ಪಿಎಸ್‌ಐ ಗುರುರಾಜ ಕಲಬುರ್ಗಿ, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಿರತೆ ಹೆಜ್ಜೆ ಗುರುತು, ಪ್ರತ್ಯಕ್ಷದರ್ಶಿ ಗಳ ಹೇಳಿಕೆ ಆಧಾರದ ಮೇಲೆ ಚಿರತೆ ಹಿಡಿಯಲು ಶೋಧ ನಡೆಸಲಾಗಿದೆ.
ಅಲ್ಲಿಲ್ಲಿ ಬಲೆಗಳನ್ನು ನಿರ್ಮಿಸಿ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಯಾರೂ ಭಯಪಡುವ ಅಗತ್ಯವಿಲ್ಲ. ವಾಟ್ಸಾಪ್, ೇಸ್‌ಬುಕ್ mಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಚಿರತೆ ಸಂಚರಿಸುತ್ತಿರುವ ನಕಲಿ ವಿಡಿಯೋ ವೈರಲ್ ಆಗಿದೆ. ಜನರು ಭಯಪಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net