ನಿಲ್ಲದ ಚಿರತೆ ವದಂತಿ

ವೈರಲ್ ಆಗಿದ್ದ ಕಾಡು ಬೆಕ್ಕಿನ ಫೋಟೋ.
ವೈರಲ್ ಆಗಿದ್ದ ಕಾಡು ಬೆಕ್ಕಿನ ಫೋಟೋ.
Published on
ಬೆಳಗಾವಿ : ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎನ್ನಲಾದ ಸುದ್ದಿಗೆ ಸಂಬಂಧಿಸಿ ಈವರೆಗೂ ಚಿರತೆ ಇರುವಿಕೆಯನ್ನು ಅರಣ್ಯ ಇಲಾಖೆ ಖಚಿತಪಡಿಸಿಲ್ಲ. ಆದರೆ ಒಂದಿಲ್ಲೊಂದು ವದಂತಿ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದು, ಗುರುವಾರ ಕಾಡುಬೆಕ್ಕಿನ ಫೋಟೋವೊಂದು ವಾಟ್ಸಾಪ್ ಗ್ರುಪ್‌ಗಳಲ್ಲಿ ಚಿರತೆ ಹೆಸರಿನಲ್ಲಿ ವೈರಲ್ ಆಗಿ ಜನರಲ್ಲಿ ಭಯ ಹುಟ್ಟಿಸಿದ ಪ್ರಸಂಗ ನಡೆದಿದೆ.
ಗಣೇಶಪುರ ರಸ್ತೆಯ ಆರ್ಮಿ ಕ್ಯಾಂಪ್ ಪ್ರದೇಶದ ಕಂಪೌಂಡ್ ಗೋಡೆಯ ಮೇಲೆ ಚಿರತೆಯನ್ನೇ ಹೋಲುವ ಕಾಡುಬೆಕ್ಕು ಹೋಗುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದರು. ಇದೇ ಫೋಟೋ ಅನೇಕ ಗ್ರುಪ್‌ಗಳಲ್ಲಿ ವೈರಲ್ ಆಗಿತ್ತು.
ಫೋಟೋ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ, ಈ ಫೋಟೋದಲ್ಲಿರುವುದು ಕಾಡುಬೆಕ್ಕು. ಚಿರತೆಯಲ್ಲ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಿಗಾ ವಹಿಸಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net