ಆಯುಷ್ಯ ಹೆಚ್ಚಲು ನಗು ಸಹಕಾರಿ

ಬೆಳಗಾವಿಯಲ್ಲಿ ಶನಿವಾರ ಜರುಗಿದ ಹಾಸ್ಯಕೂಟ ಕಾರ್ಯಕ್ರಮದಲ್ಲಿ ಡಾ.ಎಚ್.ಬಿ.ರಾಜಶೇಖರ ಮಾತನಾಡಿದರು. ಪ್ರೊ.ಜಿ.ಕೆ.ಕುಲಕರ್ಣಿ, ಡಾ.ಚಿದಾನಂದ ಗವಿಮಠ, ಮಧುಕರ ಗುಂಡೇನಟ್ಟಿ ಇತರರಿದ್ದರು.
ಬೆಳಗಾವಿಯಲ್ಲಿ ಶನಿವಾರ ಜರುಗಿದ ಹಾಸ್ಯಕೂಟ ಕಾರ್ಯಕ್ರಮದಲ್ಲಿ ಡಾ.ಎಚ್.ಬಿ.ರಾಜಶೇಖರ ಮಾತನಾಡಿದರು. ಪ್ರೊ.ಜಿ.ಕೆ.ಕುಲಕರ್ಣಿ, ಡಾ.ಚಿದಾನಂದ ಗವಿಮಠ, ಮಧುಕರ ಗುಂಡೇನಟ್ಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನಗು ಮುಖದ ಜನರು ಉತ್ತಮ ಆರೋಗ್ಯ ಹಾಗೂ ಹೆಚ್ಚಿನ ಆಯುಷ್ಯ ಹೊಂದಿರುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಜಪಾನ ದೇಶ. ಇಲ್ಲಿನ ಜನ ಶತಾಯುಷಿ ಮತ್ತು ಕ್ರಿಯಾಶೀಲರಾಗಿರುವ ಹಿಂದೆ ಹಸನ್ಮುಖದ ದಿನಚರಿ ಇದೆ ಎಂದು ಹಿರಿಯ ವೈದ್ಯ ಡಾ.ಎಚ್.ಬಿ.ರಾಜಶೇಖರ ಹೇಳಿದರು.
ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿಯಿಂದ ನಗರದ ಸಾಹಿತ್ಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ‘ವೈದ್ಯಕೀಯ ವೃತ್ತಿಯಲ್ಲಿನ ಹಾಸ್ಯ’ ಕುರಿತಾದ ನಗೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೃತ್ತಿ ಜೀವನದಲ್ಲಿ ಎದುರಾಗಿದ್ದ ಅನೇಕ ಹಾಸ್ಯ ಪ್ರಸಂಗಗಳ ಮೆಲುಕು ಹಾಕಿದರು.
ಪ್ರೊ.ಜಿ.ಕೆ.ಕುಲಕರ್ಣಿ ಹಾಸ್ಯದೊಂದಿಗೆ ಜನರನ್ನು ನಗೆಗಡಲಿನಲ್ಲಿ ತೇಲಿಸಿದರು. ಹಾಸ್ಯದ ಹಿಂದಿನ ವಿಜ್ಞಾನ ಕುರಿತು ಡಾ.ಚಿದಾನಂದ ಗವಿಮಠ, ವೈದ್ಯಕೀಯ ವೃತ್ತಿಯಲ್ಲಿನ ಹಾಸ್ಯ ಕುರಿತು ಆಯುರ್ವೇದ ವೈದ್ಯೆ ಡಾ.ಸ್ವಪ್ನಾ ಕುಲಕರ್ಣಿ, ಡಾ.ವೈಷ್ಣವಿ ಕಾಥವಟೆ ಮಾತನಾಡಿದರು.
ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಗೌರವ ಕಾರ್ಯದರ್ಶಿ ರಾಮಚಂದ್ರ ಕಟ್ಟಿ, ಹಾಸ್ಯಕೂಟದ ಎಂ.ಬಿ.ಹೊಸಳ್ಳಿ, ಅರವಿಂದ ಹುನಗುಂದ, ಗುಂಡೇನಟ್ಟಿ ಮಧುಕರ, ತಾನಾಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net