

ಹಕ್ಕಿಗಳ ಕಾಟದಿಂದಲೂ ಹಾರಾಟಕ್ಕೆ ಸಂಕಷ್ಟ
ನಿಲ್ದಾಣ ಸುತ್ತಮುತ್ತಲಿನ ರಸ್ತೆ ಪಕ್ಕ ಹಾಗೂ ಖಾಲಿ ಸೈಟ್‌ಗಳಲ್ಲಿ ಹೋಟೆಲ್ತ್ಯಾಜ್ಯ ಎಸೆಯುವ ಪ್ರವೃತ್ತಿ ಹೆಚ್ಚಿದೆ. ಇದರಿಂದ ಹದ್ದು ಸೇರಿ ವಿವಿಧ ಹಕ್ಕಿಗಳಹಾರಾಟ ಹೆಚ್ಚಾಗಿದ್ದು, ಹಗಲು ಹೊತ್ತಿನಲ್ಲಿ ಲ್ಯಾಂಡಿಂಗ್ ಮತ್ತು ಟೇಕ್‌ಆಫ್ವೇಳೆ ತೊಂದರೆಯಾಗುತ್ತಿದ್ದು. ರಸ್ತೆ ಪಕ್ಕ ಆಹಾರ ತ್ಯಾಜ್ಯ ಎಸೆಯುವುದನ್ನುತಡೆಯಲು ಸುತ್ತಮುತ್ತಲಿನ ಗ್ರಾಪಂಗಳಿಗೆ ವಿಮಾನ ನಿಲ್ದಾಣ ಪ್ರಾಧಿಕಾರಮನವಿ ಮಾಡಿದೆ.
ಡ್ರೋನ್ ಹಾರಾಟ ನಿಷೇಧ
ಸಾಂಬ್ರಾ ವಿಮಾನ ನಿಲ್ದಾಣ ಸುತ್ತಮುತ್ತಲಿನ 8 ಕಿಮೀ ವ್ಯಾಪ್ತಿಯನ್ನು ನಿಷೇಧಿತ ವಲಯ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಘೋಷಿಸಿರುವ ಹಿನ್ನೆಲೆ ಈ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್ ಮತ್ತು ಸ್ವಯಂಚಾಲಿತ ವಾಯುಯಾನ ವಾಹನಗಳ ಹಾರಾಟ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಆದೇಶ ಹೊರಡಿಸಿದ್ದಾರೆ.
ನಿಲ್ದಾಣ ನಿರ್ದೇಶಕರು ಮೌಖಿಕವಾಗಿ ಗಮನಕ್ಕೆ ತಂದಿದ್ದಾರೆ. ಸಮಗ್ರ ವರದಿ ಸಮೇತ ಪ್ರಸ್ತಾವ ಸಲ್ಲಿಸಲು ಕೇಳಿದ್ದೇವೆ. ಅದು ಬಂದ ತಕ್ಷಣ ನಿಯಮಬದ್ಧ ಕ್ರಮ ಕೈಗೊಳ್ಳಲು ಚಿಂತಿಸಲಾಗುವುದು.
ಎಲ್ಲೆಲ್ಲಿ ಲೇಸರ್ ಲೈಟ್ ಇದೆ ಎನ್ನುವುದನ್ನು ಟವರ್ ಮೂಲಕ ಪತ್ತೆ ಮಾಡಿ ಪೊಲೀಸರಿಗೆ ತಿಳಿಸಲಾಗುತ್ತಿದೆ. ಅವರೂ ಸ್ಥಳಕ್ಕೆ ತೆರಳಿ ಬಂದ್ ಮಾಡಿಸುತ್ತಿದ್ದಾರೆ. ಇದನ್ನು ಶಾಶ್ವತವಾಗಿ ತಡೆಯಬೇಕಾಗಿರುವುದರಿಂದ ಸುತ್ತಮುತ್ತ ಇಂತಿಷ್ಟು ವ್ಯಾಪ್ತಿಯಲ್ಲಿ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಕೇಳಿಕೊಂಡಿದ್ದೇವೆ.