ಕೆಆರ್‌ಐಡಿಎಲ್ ಪ್ರಗತಿ ಪರಿಶೀಲನಾ ಸಭೆ

 ಬೆಳಗಾವಿಯಲ್ಲಿ ಶನಿವಾರ ಜಿಪಂ ಸಿಇಒ ರಾಹುಲ ಶಿಂಧೆ ಕೆಆರ್‌ಐಡಿಎಲ್ ಸಭೆ ಕೈಗೊಂಡರು.
ಬೆಳಗಾವಿಯಲ್ಲಿ ಶನಿವಾರ ಜಿಪಂ ಸಿಇಒ ರಾಹುಲ ಶಿಂಧೆ ಕೆಆರ್‌ಐಡಿಎಲ್ ಸಭೆ ಕೈಗೊಂಡರು.
Published on
ಬೆಳಗಾವಿ: ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪಮೆಂಟ್ ಲಿಮಿಟೆಡ್(ಕೆಆರ್‌ಐಡಿಎಲ್) ವತಿಯಿಂದ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಸೂಚನೆ ನೀಡಿದ್ದಾರೆ.
ನಗರದ ಕೆಆರ್‌ಐಡಿಎಲ್ ವಲಯ ಕಚೇರಿಯ ಸಭಾಂಗಣದಲ್ಲಿ ಶನಿವಾರ ಜರುಗಿದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಢಿದ ಅವರು, ಅನುಮೋದನೆಯಾಗಿದ್ದರೂ ಆರಂಭವಾಗದ ಕಾಮಗಾರಿಗಳಿಗೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಮೊದಲ ಆದ್ಯತೆಯಲ್ಲಿ ಭೇಟಿ ನೀಡಬೇಕು. ಆರಂಭವಾಗದಿರಲು ಕಾರಣಗಳ ಬಗ್ಗೆ ತಿಳಿದುಕೊಂಡು, ಅವುಗಳನ್ನು ಇತ್ಯರ್ಥಪಡಿಸಿಕೊಂಡು ತ್ವರಿತವಾಗಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಜಿಪಂ ಉಪಕಾರ್ಯದರ್ಶಿ ಬಸವರಾಜ ಅಡವಿಮಠ (ಅಭಿವೃದ್ಧಿ), ಕೆಆರ್‌ಐಡಿಎಲ್ ಅಧೀಕ್ಷಕ ಅಭಿಯಂತರ ಸಿದ್ಧಾರ್ಥ ಎಸ್., ಕಾರ್ಯಪಾಲಕ ಅಭಿಯಂತರ ಎಸ್.ಬಿ.ಶೇಗುಣಸಿ, ಚಿಕ್ಕೋಡಿ ಕಾರ್ಯಪಾಲಕ ಅಭಿಯಂತರ ಆರ್.ಪಿ.ನಾರಾಯಣಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net