ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಮಹನೀಯರ ತ್ಯಾಗ, ಪರಿಶ್ರಮ, ದಾನಿಗಳ ಕೊಡುಗೆಯಿಂದ ಕೆಎಲ್‌ಇ ಸಂಸ್ಥೆ ಬೆಳೆದಿದೆ. ಅದಕ್ಕೆ ಡಾ.ಪ್ರಭಾಕರ ಕೋರೆ ಮತ್ತಷ್ಟು ಮೆರುಗು ನೀಡಿದ್ದು, ಕಡಲಾಚೆ ಶಿಕ್ಷಣ, ಆರೋಗ್ಯ ಕ್ಷೇತ್ರ ವಿಸ್ತರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಎಲ್‌ಇ ಸಂಸ್ಥೆ ತನ್ನ ಹೆಗ್ಗುರುತು ಮೂಡಿಸಿದೆ ಎಂದರು. ಸಾಧಕ ವಿದ್ಯಾರ್ಥಿಗಳು ಹಾಗೂ ಡಾ.ಎಂ.ಜಿ.ಹಂಜಿಯನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಮಹೇಶ ಕುಮಠಳ್ಳಿ, ಪ್ರಾಚಾರ್ಯರಾದ ಪ್ರಶಾಂತ ಮಗದುಮ್ಮ, ಶ್ರೀನಿವಾಸ ಕನಪರ್ತಿ, ಮಲ್ಲಿಕಾರ್ಜುನ, ರೇಷ್ಮಾ ಇನಾಮದಾರ, ಶಂಭುಲಿಂಗ ಮಮದಾಪುರ, ವಿಜಯಕುಮಾರ ಬುರ್ಲಿ, ಪ್ರಕಾಶ ಪಾಟೀಲ, ಅಶೋಕ ಬುರ್ಲಿ, ಶ್ರೀಶೈಲ ಸಂಕ, ಶಿವಶಂಕರ ಹಂಜಿ ಇತರರಿದ್ದರು.