ಕುಸನಾಳ ಗ್ರಾಮದಲ್ಲಿ ಶಿರಗುಪ್ಪಿ ಗ್ರಾಮದ ಕೆಎಲ್‌ಇ ಸಂಸ್ಥೆ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸೂರಜ ಕುಂಬಾರ, ಬಿ.ಆರ್. ನರವಾಡೆ, ಸ್ವಾತಿ ಪಾಟೀಲ ಇತರರಿದ್ದರು.
Published on:
Copied
Follow Us
ಮಾಂಜರಿ: ಕೆಎಲ್‌ಇ ಸಂಸ್ಥೆ ಜನಸಾಮಾನ್ಯರ ಆರೋಗ್ಯ ಸೇವೆಯಲ್ಲಿ ಅಪಾರ ಸಾಧನೆ ಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಚಿಕ್ಕೋಡಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸೂರಜ ಕುಂಬಾರ ಹೇಳಿದರು.
ಸಮೀಪದ ಕುಸನಾಳ ಗ್ರಾಮದಲ್ಲಿ ಶಿರಗುಪ್ಪಿಯ ಕೆಎಲ್‌ಇ ಸಂಸ್ಥೆ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಆದ್ಯತೆ ನೀಡಿದ್ದಾರೆ ಎಂದರು.
ಆಯುರ್ವೇದಿಕ್ ಮಹಾವಿದ್ಯಾಲಯದ
ಡಾ.ಸೂರಜ ಕುಂಬಾರ ನಶೆಮುಕ್ತ ಭಾರತ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಮಹಾವಿದ್ಯಾಲಯದ ಇನ್ನಿತರ ವೈದ್ಯರು ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧ ವಿತರಿಸಿದರು.