ಮಕ್ಕಳ ಪ್ರಗತಿಯತ್ತ ಗಮನವಿರಲಿ

 ಶಾಸಕ ಮಹಾಂತೇಶ ಕೌಜಲಗಿ ಸಲಹೆ  ಹಿರೇಬೂದನೂರಲ್ಲಿ ವಿದ್ಯಾರ್ಥಿಗಳ ಜಾತ್ರೆ ಮುರಗೋಡ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಅಮೃತ ಸಾಣಿಕೂಪ್ಪ, ಪ್ರಶಾಂತ ಪಟ್ಟಣಶೆಟ್ಟಿ ಇತರರಿದ್ದರು.
ಶಾಸಕ ಮಹಾಂತೇಶ ಕೌಜಲಗಿ ಸಲಹೆ ಹಿರೇಬೂದನೂರಲ್ಲಿ ವಿದ್ಯಾರ್ಥಿಗಳ ಜಾತ್ರೆ ಮುರಗೋಡ ಗ್ರಾಮದ ಅಂಗನವಾಡಿ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಅಮೃತ ಸಾಣಿಕೂಪ್ಪ, ಪ್ರಶಾಂತ ಪಟ್ಟಣಶೆಟ್ಟಿ ಇತರರಿದ್ದರು.
Published on
ಮುರಗೋಡ: ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಕಲಿಕೆ ಜತೆಗೆ ಉಜ್ವಲ ಭವಿಷ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ವಿಜ್ಞಾನ ಮಾದರಿ ಹಾಗೂ ಶೈಕ್ಷಣಿಕ ಪ್ರವಾಸ ಸೇರಿದಂತೆ ಹಲವು ಯೋಜನೆ ನೀಡಿದೆ. ರಜೆ ದಿನಗಳಲ್ಲಿ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸಮೀಪದ ಹಿರೇಬೂದನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪಂಚಾಯತ ರಾಜ್ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಮಕ್ಕಳ ಜಾತ್ರೆ ಉದ್ಘಾಟಿಸಿ ಮಾತನಾಡಿದರು.
ತವಗಮಠದ ಬಾಳಯ್ಯ ಸ್ವಾಮೀಜಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಉಮೇಶ್ವರ ಮರಗಾಲ, ಕ್ಷೇತ್ರ ಶೈಕ್ಷಣಿಕ ಸಮನ್ವಯಾಧಿಕಾರಿ ಬಸವರಾಜ ಬ್ಯಾಳಿ, ಪಿಡಿಒ ಆರ್.ಎಲ್.ಬಾಗಿಲದ, ಸಿಪಿಐ ಶಿವಾನಂದ ಗುಡಗನಟ್ಟಿ, ಪ್ರವೀಣ ಗಂಗೋಳ, ಯು.ಬಿ.ಉಣ್ಣಿ, ನಾಗಪ್ಪ ಮೇಟಿ, ಶಿಕ್ಷಕ ಉಮೇಶ ಮರಗಾಲ, ಮಹಾಂತೇಶ ಕಳ್ಳಿಬಡ್ಡಿ, ಸೋಮಪ್ಪ ಮರಗಾಲ, ಚನ್ನಪ್ಪ ಯಡವನವರ, ಲಕ್ಷ್ಮಣ ತಳವಾರ, ಯಲ್ಲಪ್ಪ ನಾಯ್ಕರ, ಬಾಳೇಶ ಮೆಟಗುಪ್ಪಿ, ಗ್ರಾಪಂ ಅಧ್ಯಕ್ಷೆ ಮಾಜಿ ಮಹಾದೇವಿ ಸೋರಣ್ಣವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net