ಕರ್ನಾಟಕ ರಕ್ಷಣಾ ವೇದಿಕೆ ಮನವಿ

ಮಾಜಿ ಶಾಸಕ ದಿಗಂಬರ ಪಾಟೀಲ ವಿರುದ್ಧ ತಹಸೀಲ್ದಾರ್‌ಗೆ ಮನವಿ ಸಲ್ಲಿಸುತ್ತಿರುವ ರಾಜ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳು. ವಿಠ್ಠಲ ಹಿಂಡಲಕರ, ದಶರಥ ಬನೋಶಿ, ಆರೋಗ್ಯಪ್ಪ ಪಾದನಕಟ್ಟಿ ಇತರರಿದ್ದರು.
ಮಾಜಿ ಶಾಸಕ ದಿಗಂಬರ ಪಾಟೀಲ ವಿರುದ್ಧ ತಹಸೀಲ್ದಾರ್‌ಗೆ ಮನವಿ ಸಲ್ಲಿಸುತ್ತಿರುವ ರಾಜ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳು. ವಿಠ್ಠಲ ಹಿಂಡಲಕರ, ದಶರಥ ಬನೋಶಿ, ಆರೋಗ್ಯಪ್ಪ ಪಾದನಕಟ್ಟಿ ಇತರರಿದ್ದರು.
Published on

ಖಾನಾಪುರ: ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಹಾರಾಷ್ಟ್ರ ಪರ ಜೈಕಾರ ಕೂಗಿದ ಮಾಜಿ ಶಾಸಕ ದಿಗಂಬರ ಪಾಟೀಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಖಾನಾಪುರ ತಾಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ಖಾನಾಪುರ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಭೆಯಲ್ಲಿ ನಡೆದ ಘಟನೆಯಲ್ಲಿ ದಿಗಂಬರ ಪಾಟೀಲ
ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ತಹಸೀಲ್ದಾರ್ ಮೌನವಹಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಕರವೇ ತಾಲೂಕಾಧ್ಯಕ್ಷ ವಿಠ್ಠಲ ಹಿಂಡಲಕರ, ದಶರಥ ಬನೋಶಿ, ಆರೋಗ್ಯಪ್ಪ ಪಾದನಕಟ್ಟಿ, ಭರತೇಶ ಜೋಳದ, ಜಯವಂತ ನಿಡಗಲಕರ, ಮಲ್ಲಿಕಾರ್ಜುನ ಹೊಸೂರಿ, ಸಂತೋಷ ಮಾರಿಹಾಳ, ಮಡಿವಾಳಿ ಗುಣಪ್ಪಾಚೆ, ಮಡಿವಾಳಿ ಭೂಪಣ್ಣಿ, ನಾರಾಯಣ ಸಾವಂತ್, ಶ್ರೀಕಾಂತ ಪಾಟೀಲ, ತಮ್ಮಣ್ಣ ಗವನಾಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net