ರಾಹುಲ್ ಗಾಂಧಿಗೆ ಕರ್ನಾಟಕ ಎಟಿಎಂ

ಬೆಳಗಾವಿಯಲ್ಲಿ ಭಾನುವಾರ ಎನ್.ರವಿಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕರಾದ ಶಶಿಕಲಾ ಜೊಲ್ಲೆ, ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಸುಭಾಸ ಪಾಟೀಲ, ಮುರಗೇಂದ್ರಗೌಡ ಪಾಟೀಲ ಇದ್ದರು.
ಬೆಳಗಾವಿಯಲ್ಲಿ ಭಾನುವಾರ ಎನ್.ರವಿಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕರಾದ ಶಶಿಕಲಾ ಜೊಲ್ಲೆ, ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಸುಭಾಸ ಪಾಟೀಲ, ಮುರಗೇಂದ್ರಗೌಡ ಪಾಟೀಲ ಇದ್ದರು.
Published on

ಬೆಳಗಾವಿ :

ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಕೆಲವರ ಹೆಸರನ್ನು ಮೊದಲೇ ತೆಗೆದುಹಾಕಿದ್ದಾರೆ. ಕೆಲವರ ಹೆಸರಿದ್ದರೂ ಅವರನ್ನು ಕೈಬಿಟ್ಟು ಬೇರೆಯವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಸಂಪುಟದಲ್ಲಿ ಶೇ.80ರಷ್ಟು ಸಚಿವರನ್ನು ಪೇಮೆಂಟ್ ಕೋಟಾದಲ್ಲಿ ಆಯ್ಕೆ ಮಾಡಿದಂತಿದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ ಆರೋಪಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ತಂಡದ ಬರ ಅಧ್ಯಯನದ ಮಧ್ಯೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದರ್ಥದಲ್ಲಿ ರಾಹುಲ್ ಗಾಂಧಿಗೆ ಕರ್ನಾಟಕ ಎಟಿಎಂ ಆದಂತಾಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಆ ಎಟಿಎಂಗಳಿವೆ ಎಂಬ ಸತ್ಯಾಂಶ ಮುಂದೊಂದು ದಿನ ಹೊರಬಲಿದೆ ಎಂದರು.
ಸಚಿವ ಸಂಪುಟದಲ್ಲಿ ಬ್ರಾಹ್ಮಣರು ಸೇರಿದಂತೆ ಹಲವು ಸಮುದಾಯದವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಇದು ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿದ್ದಾರೆ. ಗಾಯತ್ರಿ ಶಾಂತಕುಮಾರ ಹೆಸರಿದ್ದರೂ ಕೈಬಿಟ್ಟಿದ್ದಾರೆ. ಮಾಂಕಾಳು ವೈದ್ಯ ಹೆಸರು ಹಾಕಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೊಟ್ಟಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಮಂಕಾಳು ವೈದ್ಯ ಪೇಮೆಂಟ್ ಮಾಡಿಲ್ಲದೇ ಇರುಬಹುದು, ಹೀಗಾಗಿ, ಅವರ ಹೆಸರು ಕೈಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದಾರೆ. ಅವರೆಲ್ಲರನ್ನೂ ವಾಪಸ್ ಕಳುಹಿಸುವ ಕೆಲಸವಾಗಬೇಕು. ಬೆಂಗಳೂರಿನಲ್ಲಿ 2,894 ಜನ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ವಲಸಿಗರ ಸಂಖ್ಯೆ ಇನ್ನೂ ಹೆಚ್ಚಾಗಿದೆ. ರಾಜ್ಯಾದ್ಯಂತ ಒಂದು ಲಕ್ಷಕ್ಕಿಂತ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆಂಬ ಅಂದಾಜಿದೆ. ನಾಮಮಾತ್ರಕ್ಕೆ ಕೆಲವೇ ನುಸೂಳುಕೋರರನ್ನು ಮಾತ್ರ ಪತ್ತೆ ಮಾಡಲಾಗಿದೆ. ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡಿಲ್ಲ ಎಂದು ತೋರಿಸಿಕೊಳ್ಳಲು ಈ ನಾಟಕೀಯ ದಾಳಿ ನಡೆಸಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷ ಎರಡು ಹೋಳಾಗಿದೆ. ಸಿದ್ದರಾಮಯ್ಯ ಮೌನವಾಗಿದ್ದಾರೆ. ಅವರನ್ನು ಒತ್ತಾಯಪೂರ್ವಕ ಕೆಳಗಡೆ ಇಳಿಸಿದ್ದರಿಂದ ಒಬಿಸಿ ಸಮುದಾಯ ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿದೆ. ಸದ್ಯ ಮಂತ್ರಿಗಳನ್ನಷ್ಟೇ ಮಾಡಿದ್ದಾರೆ. ಖಾತೆ ಹಂಚಿಕೆ ಮಾಡಿಲ್ಲ. ಖಾತೆ ಹಂಚಿಕೆ ಮಾಡಿದಾಗ, ಆ ಕುರಿತಾದ ಅಸಮಾಧಾನವೂ ಸ್ಫೋಟಗೊಳ್ಳಲಿದೆ ಎಂದರು.
ಶಾಸಕರಾದ ಶಶಿಕಲಾ ಜೊಲ್ಲೆ, ವಿಠ್ಠಲ ಹಲಗೇಕರ, ಮಾಜಿ ಶಾಸಕ ಸಂಜಯ ಪಾಟೀಲ, ಸುಭಾಸ ಪಾಟೀಲ, ಮುರಗೇಂದ್ರಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net