ಬೆಳಗ್ಗೆ ಕರಿಸಿದ್ಧೇಶ್ವರ ಗದ್ದುಗೆಗೆ ಅಭಿಷೇಕ, ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಮಸ್ಥರು ನೈವೇದ್ಯ ಅರ್ಪಿಸಿ ದರ್ಶನ ಪಡೆದು ಹರಕೆ ತೀರಿಸಿದರು. ಮಧ್ಯಾಹ್ನ ವಿವಿಧ ಕಲಾಪ್ರದರ್ಶನ ಜರುಗಿದವು. ಸಂಜೆ ಅರಟಾಳ, ಬಡಚಿ, ದೇಸಾಯರಟ್ಟಿ, ಬಾಡಗಿ, ಹಾಲಳ್ಳಿ, ಐಗಳಿ, ಕನಾಳ, ಕುಮಟಗಿ, ತುಂಗಳ, ಸಾವಳಗಿ ಸೇರಿ 25 ಗ್ರಾಮಗಳಿಂದ ಆಗಮಿಸಿದ ಕರಿಸಿದ್ಧೇಶ್ವರ ಪಲ್ಲಕ್ಕಿ ಬರಮಾಡಿಕೊಂಡು ಪೂಜೆ ಸಲ್ಲಿಸಿದರು. ಅರ್ಚಕ ಬಸವರಾಜ ಪೂಜಾರಿ, ಮುಖಂಡರಾದ ಹನುಮಂತ ಸವದಿ, ಮಾಯಣ್ಣ ಅಜ್ಜಣಗಿ, ಮಾಯಪ್ಪ ಸನದಿ, ನಾಮದೇವ ಸಬಕಾಳೆ, ಮುತ್ತಪ್ಪ ಯಂಗಾರೆ, ಲಕ್ಷ್ಮಣ ಪೂಜಾರಿ, ಮುತ್ತಪ್ಪ ಅಂಬಾಜಿ, ಬಸವರಾಜ ಸವದಿ, ಶ್ರೀಶೈಲ ಸಿಂಧೂರ, ಶಂಕರ ಸವದಿ ಇತರರಿದ್ದರು.