ರಸಪ್ರಶ್ನೆ ಸ್ಪರ್ಧೆಯಲ್ಲಿ ಹರ್ಷಿತ ನ್ಯಾಮಗೌಡರ ಮತ್ತು ಪ್ರಜ್ವಲ್ಕುಮಾರ ಪ್ರಥಮ, ಇಂಗ್ಲಿಷ್ ಚರ್ಚಾ ಸ್ಪರ್ಧೆ ತೃಪ್ತಿ ಪಾಟೀಲ ಪ್ರಥಮ, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಶ್ರೇಯಲ್ ದಳವಾಯಿ ಮತ್ತು ಸಿಂಚನಾ ಶಿಂಗನ್ನವರ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇಂಗ್ಲಿಷ್ ಪ್ರಬಂಧದಲ್ಲಿ ರೋಹಿತ ಬೆಲ್ಲದ ದ್ವೀತಿಯ, ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕಾರ್ತಿಕ ಬೆಳಗಾವಿ ತೃತೀಯ ಸ್ಥಾನ ಗಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷೆ ಮಂಗಳಾ ಢಮ್ಮಣಗಿ, ಪ್ರಾಚಾರ್ಯರಾದ ಹಣಮೇಶ ದುಡ್ಯಾಳ, ಪುನೀತ ಎಂ., ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಅಭಿನಂದಿಸಿದ್ದಾರೆ.