ಒಗ್ಗಟ್ಟು ಬೆಳೆಸುವಲ್ಲಿ ಜಾತ್ರೆ ಸಹಕಾರಿ

ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಗದಿಗಯ್ಯ ಹಿರೇಮಠ ಉಪನ್ಯಾಸ ನೀಡಿದರು. ಮಹೇಶ್ವರ ಶಿವಾಚಾರ್ಯರು, ಗುರುಸಿದ್ಧೇಶ್ವರ ಶಿವಾಚಾರ್ಯರು ಇತರರಿದ್ದರು.
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಗದಿಗಯ್ಯ ಹಿರೇಮಠ ಉಪನ್ಯಾಸ ನೀಡಿದರು. ಮಹೇಶ್ವರ ಶಿವಾಚಾರ್ಯರು, ಗುರುಸಿದ್ಧೇಶ್ವರ ಶಿವಾಚಾರ್ಯರು ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮಲ್ಲಮ್ಮನ ಬೆಳವಡಿ
ಎಲ್ಲ ಸಮುದಾಯ ಒಗ್ಗೂಡಿಸಿ ಪರಸ್ಪರ ಪ್ರೀತಿ-ವಿಶ್ವಾಸ ಬೆಳೆಸುವ ಮೂಲಕ ಸೇವಾ ಮನೋಭಾವ ರೂಢಿಸುವಲ್ಲಿ ಜಾತ್ರೆ, ಉತ್ಸವ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮೊರಬ ಜಡಿಮಠದ ಮಹೇಶ್ವರ ಶಿವಾಚಾರ್ಯರು ಹೇಳಿದರು.
ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಉಪನ್ಯಾಸಕ ಗದಿಗೆಯ್ಯ ಹಿರೇಮಠ ಮಾತನಾಡಿ, ಪ್ರತಿಯೊಬ್ಬರು ಆಧುನಿಕ ಜೀವನ ಪದ್ಧತಿಗೆ ಮಾರುಹೋಗದೆ ಸಂಸ್ಕೃತಿ, ಸಂಸ್ಕಾರ ರೂಢಿಸಿಕೊಳ್ಳಬೇಕು. ಯಾವ ಕುಟುಂಬದಲ್ಲಿ ಸಂಸ್ಕಾರವಿತ್ತದೆಯೊ ಆ ಮನೆ ನಂದನವಾಗುತ್ತದೆ ಎಂದರು.
ಶಿರಕೋಳದ ಗುರುಸಿದ್ಧೇಶ್ವರ ಶಿವಾಚಾರ್ಯರು, ಮಲ್ಲಮ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ರುದ್ರಯ್ಯಸ್ವಾಮಿ ರೊಟ್ಟಯ್ಯನವರಮಠ, ಗದಿಗಯ್ಯಸ್ವಾಮಿ ಅಚ್ಚುತನವರಮಠ, ಸ್ಥಳೀಯ ವೈದ್ಯರ ಸಂಘದ ಅಧ್ಯಕ್ಷ ಡಾ.ಎಂ.ಎಸ್.ಅಮ್ಮಣಗಿ, ಶ್ರೀಶೈಲ ಯಳ್ಳೂರು ಅವರನ್ನು ಜಾತ್ರಾ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಮುಖಂಡರಾದ ಸಿದ್ದಪ್ಪ ಸಿದ್ದಣ್ಣವರ, ಬಸವರಾಜ ಸುಬೇದಾರ, ಶಿವಪ್ಪ ಮರಕಟ್ಟಿ, ಬಾಳಪ್ಪ ಚವರದ, ವಕೀಲ ಶಿವಾನಂದ ಸಿದ್ದಣ್ಣವರ ಇತರರಿದ್ದರು. ಪ್ರಾಚಾರ್ಯ ಮಹಾಂತೇಶ ಉಪ್ಪಿನ ಸ್ವಾಗತಿಸಿದರು. ಪೂಜಾ ಕುಂಬಾರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net