ಬೆಳಗಾವಿಯ ಟಿಳಕವಾಡಿ ಖಾನಾಪುರ ರಸ್ತೆಯ ಹೆಡಾ ಮ್ಯಾನಷನ್‌ನಲ್ಲಿ ಜಾಗ್ವಾರ್ ಆರ್ಟೈಸ್ ಶೋರೂಮ್‌ನ್ನು ಗಣ್ಯರು ಉದ್ಘಾಟಿಸಿದರು. ವಿಜಯಕುಮಾರ ಹೆಡಾ, ನಾರಾಯಣ ಹೆಡಾ, ಪುನೀತ ವರ್ಮಾ, ಎಂ.ಟಿ.ಹೆಗಡೆ, ಗೌರವ ಮಲ್ಹೋತ್ರಾ, ಸಂಜಯ ಪಾಟೀಲ, ಬಕುಲ ಜೋಶಿ, ಗೋದಾವರಿ ಹೆಡಾ, ಶಕುಂತಲಾ ಹೆಡಾ ಇದ್ದರು.
Published on:
Copied
Follow Us
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರೀಮಿಯಂ ಬಾತರೂಮ್ ಪರಿಕರ ಮತ್ತು ಟೈಲ್ಸ್ ಶೋರೂಮ್ ಹೆಗ್ಗಳಿಕೆಗೆ ಪಾತ್ರವಾಗಿರುವ ಹೆಡಾ ಸೆರಾಮಿಕ್ಸ್‌ನಲ್ಲಿ ಜಾಗ್ವಾರ್ ಗ್ರೂಪ್‌ನ ಐಷಾರಾಮಿ ಬಾತರೂಮ್ ಪರಿಕರಗಳ ಆರ್ಟೈಸ್ ಉತ್ಪನ್ನಗಳ ಶೋರೂಮ್ ಟಿಳಕವಾಡಿ ಹೆಡಾ ಮ್ಯಾನಷನ್‌ನಲ್ಲಿ ಆರಂಭಿಸಲಾಗಿದೆ ಎಂದು ಹೆಡಾ ಸೆರಾಮಿಕ್ಸ್‌ನ ವಿಜಯಕುಮಾರ ಹೆಡಾ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005ರಿಂದ ಹೆಡಾ ಸೆರಾಮಿಕ್ಸ್ ನಡೆಸಿಕೊಂಡು ಬಂದಿದ್ದೇವೆ. ಈವರೆಗೆ ಜಾಗ್ವಾರ್ ಗ್ರೂಪ್‌ನ ಉತ್ಪನ್ನಗಳ ವಿಶ್ವಾಸಾರ್ಹ ಪಾಲುದಾರಾಗಿ ಗುರುತಿಸಿಕೊಂಡಿದ್ದೇವೆ. ಈಗ ಇದೇ ಸಂಸ್ಥೆ ಪರಿಚಯಿಸುತ್ತಿರುವ ಆರ್ಟೈಸ್ ಉತ್ಪನ್ನಗಳಿಗಾಗಿ ಮೂರು ಸಾವಿರ ಚದರ ಅಡಿಯಲ್ಲಿ ಪ್ರತ್ಯೇಕ ಶೋರೂಮ್ ಆರಂಭಿಸಿದ್ದೇವೆ. ಈ ಮೂಲಕ 6,500 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣಕ್ಕೆ ಶೋರೂಮ್ ವಿಸ್ತರಣೆಗೊಂಡು ಉತ್ತರ ಕರ್ನಾಟಕದಲ್ಲೇ ದೊಡ್ಡದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಜಾಗ್ವಾರ್ ಗ್ರೂಪ್‌ನ ಮುಖ್ಯ ಸಲಹೆಗಾರ ಗೌರವ ಮಲೋತ್ರಾ ಮಾತನಾಡಿ, 1960ರಲ್ಲಿ ಸ್ಥಾಪಿತವಾದ ಜಾಗ್ವಾರ್ ಗ್ರೂಪ್ ಬಾತರೂಮ್ ಮತ್ತು ಲೈಟಿಂಗ್ ಸೆಲ್ಯೂಷನ್ಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಉತ್ಪಾದನಾ ಶ್ರೇಷ್ಠತೆ ಮತ್ತು ಉತ್ಪನ್ನ ನವೀನತೆಯಲ್ಲಿ 65ಕ್ಕೂ ಹೆಚ್ಚು ವರ್ಷಗಳ ಪರಂಪರೆ ಹೊಂದಿದೆ.
ಈಗ ‘ಆರ್ಟೈಸ್’ ಹೆಸರಿನ ಒಂದು ಪ್ರೀಮಿಯಂ ಮತ್ತು ಐಷಾರಾಮಿ ಸ್ನಾನಗೃಹದ ಉತ್ಪನ್ನಗಳನ್ನು ಪರಿಚಯಿಸಿದ್ದೇವೆ ಎಂದರು.
ಆರ್ಟೈಸ್ ವಿಭಾಗದ ಮುಖ್ಯಸ್ಥ ಪುನೀತ ವರ್ಮಾ ಮಾತನಾಡಿ, ಆರ್ಟೈಸ್ ಉತ್ಪನ್ನಗಳನ್ನು ಕಲಾಕೃತಿಗಳಂತೆ ವಿನ್ಯಾಸಗೊಳಿಸಲು ಜಾಗತಿಕ ಮಟ್ಟದ ಪ್ರಸಿದ್ಧ ವಿನ್ಯಾಸಕಾರರು ಕೆಲಸ ಮಾಡಿದ್ದಾರೆ. ನಳ ಮತ್ತು ವಾಲ್ವ್‌ಗಳನ್ನು ಅತ್ಯಂತ ಮೃದು ಮತ್ತು ನಿಖರವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ನೀರಿನ ತಾಪಮಾನ (ಬಿಸಿ ಮತ್ತು ತಣ್ಣೀರು) ನಿಖರವಾಗಿ ಕಾಯ್ದುಕೊಳ್ಳುವ ಅತ್ಯಾಧುನಿಕ ತಂತ್ರಜ್ಞಾನವಿದೆ. ನೀರಿನ ಹರಿವಿನ ವೇಗ ಕಾಯ್ದುಕೊಂಡು ಪೋಲಾಗುವುದನ್ನು ತಡೆಯುವ ಪರಿಸರ ಸ್ನೇಹಿ ಕಾರ್ಯವಿಧಾನ ಒಳಗೊಂಡಿದೆ. ಐಷರಾಮಿ ಸ್ನಾನಗೃಹಕ್ಕೆ ಬೇಕಾಗುವಲ್ಲಿ, ಶವರ್ ಸಿಸ್ಟಮ್, ವಾಶ್ ಬೇಸಿನ್ ಮತ್ತು ಸೆರಾಮಿಕ್ಸ್, ಬಾತ್ ಟಬ್ ಮತ್ತು ವೆಲ್ನೆಸ್ ಉತ್ಪನ್ನ, ಅಲಂಕಾರಿಕ ಪರಿಕರಗಳಿವೆ ಎಂದು ವಿವರಿಸಿದರು.
ಜಾಗ್ವಾರ್ ಗ್ರೂಪ್ ದಕ್ಷಿಣ ವಲಯ ಮುಖ್ಯಸ್ಥ ಎಂ.ಟಿ.ಹೆಗಡೆ ಮಾತನಾಡಿ, ಮೊದಲಿನಿಂದಲೂ ಹೆಡಾ ಸೆರಾಮಿಕ್ಸ್ ನಮ್ಮ ಸಂಸ್ಥೆಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಿಕೊಟ್ಟಿದೆ. ಬೆಳಗಾವಿ ಭಾಗದಲ್ಲಿ ನಮ್ಮ ಉತ್ಪನ್ನಗಳಿಗೆ ಬಹು ಬೇಡಿಕೆ ಇದೆ. ಹೀಗಾಗಿ, ಸಂಸ್ಥೆಯಿಂದ ಹೊಸದಾಗಿ ಪರಿಚಯಿಸಿರುವ ಐಷರಾಮಿ ಬಾತರೂಮ್‌ಗೆ ಬೇಕಾಗುವ ಉತ್ಕೃಷ್ಟ ಶ್ರೇಣಿಯ ಆರ್ಟೈಸ್ ಉತ್ಪನ್ನಗಳಿಗಾಗಿ ಪ್ರತ್ಯೇಕ ಶೋರೂಮ್ ಆರಂಭಿಸುತ್ತಿದ್ದೇವೆ ಎಂದರು.