ಪ್ರಕೃತಿ ಸಮತೋಲನ ಕಾಪಾಡುವುದು ಅಗತ್ಯ

ಬೆಳಗಾವಿ ವನಿತಾ ವಿದ್ಯಾಲಯ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಮಹೇಶ ವಿಜಾಪುರ, ಜೋಸ್ಫೀನ್ ಗುಂಟಿ, ರಾಜಪಾಲ್ ಜಾನ್, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ವನಿತಾ ವಿದ್ಯಾಲಯ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಮಹೇಶ ವಿಜಾಪುರ, ಜೋಸ್ಫೀನ್ ಗುಂಟಿ, ರಾಜಪಾಲ್ ಜಾನ್, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
Published on
ಪ್ರಕೃತಿ ಸಮತೋಲನ ಕಾಪಾಡುವುದು ಅಗತ್ಯ
ಬೆಳಗಾವಿ: ವನಿತಾ ವಿದ್ಯಾಲಯ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ ಮಾತನಾಡಿ, ಪ್ರಸಕ್ತ ಸಾಲಿನ ವಿಶ್ವ ಪರಿಸರ ದಿನದ ಧ್ಯೇಯವಾಕ್ಯದ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿಕೊಟ್ಟರು. ಪ್ರಕೃತಿ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ, ಗಿಡ-ಮರಗಳನ್ನು ಬೆಳೆಸುವುದು, ಪ್ಲಾಸ್ಟಿಕ್ ಬಳಕೆ ಸಂಪೂರ್ಣ ಕಡಿತಗೊಳಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿನಿಯರು, ಸಿಬ್ಬಂದಿ ಒಟ್ಟಾಗಿ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಸ್ವೀಕರಿಸಿ, ಪ್ರಕೃತಿ ರಕ್ಷಿಸುವಲ್ಲಿ ಬದ್ಧತೆ ತೋರಿದರು.
ವಿಜಯವಾಣಿ ದಿನಪತ್ರಿಕೆ ಪ್ರಸರಣ ವಿಭಾಗದ ವ್ಯವಸ್ಥಾಪಕ ರಘುವೀರ ಕುಲಕರ್ಣಿ, ಪ್ರಾಚಾರ್ಯೆ ಜೋಸ್ಫೀನ್ ಗುಂಟಿ, ವನಿತಾ ವಿದ್ಯಾಲಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಾಜಪಾಲ್ ಜಾನ್, ಸಿಬ್ಬಂದಿ ಶಶಿಕಲಾ ಡಿ., ವಾಸೀಂ ನನಜೀಕರ, ಶಾಂತಮ್ಮ ಎಲಿಝಬೆತ್, ಆ್ಯನಿ ಜಾಕ್ಲೀನ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net