ಗೋಕಾಕ ನಗರದಲ್ಲಿ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಕಲಾವಿದ ಈಶ್ವರಪ್ಪ ಮಿಣಚಿ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ಸುವರ್ಣಾತಾಯಿ ಹೊಸಮಠ, ಪೂರ್ಣಿಮಾ ಹತ್ತರಕಿ, ಮಹಾಂತೇಶ ತಾಂವಶಿ, ಮಲ್ಲಿಕಾರ್ಜುನ ವಕ್ಕುಂದ ಇತರರಿದ್ದರು.
ಬಸವ ಮಂದಿರದಲ್ಲಿ ಸ್ವರ ಸಂಗಮ ಬಳಗ ಗುರು ಪೂರ್ಣಿಮೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಜ್ಞಾನದಿಂದ ಸುಜ್ಞಾನದೆಡೆ ಕೊಂಡೊಯ್ಯುವ ಗುರುಗಳ ನಿಸ್ವಾರ್ಥ ಸೇವೆ ಸ್ಮರಣೀಯ. ಶಿಕ್ಷಣ ಹಾಗೂ ವೃತ್ತಿ ಬದುಕು ಕಲಿಸಿದ ಎಲ್ಲ ಗುರುಗಳನ್ನು ಗೌರವಿಸಬೇಕು ಎಂದರು.
ಸ್ಥಳೀಯ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿದರು. ಪೂರ್ಣಿಮಾ ಹತ್ತರಕಿ, ಮಹಾಂತೇಶ ತಾಂವಶಿ, ಮಲ್ಲಿಕಾರ್ಜುನ ವಕ್ಕುಂದ, ಬಾಬಯ್ಯ ದೇಗಾವಿಮಠ, ವಿದ್ಯಾ ಮಗದುಮ್ಮ, ಅನಸೂಯಾ ಧುಳಾಯಿ, ಶಶಿಕಲಾ ಶಿಂಧೆ, ಸೋಮಶೇಖರ ಮಗದುಮ್ಮ, ಚಂದ್ರಶೇಖರ ಶೀಗಿಹಳ್ಳಿ, ಅಮೃತರಾಜ ವಕ್ಕುಂದ, ದಿನೇಶ ಜುಗಳಿ ಇತರರಿದ್ದರು.