ತನಿಖೆ ನಡೆದಿದೆ: ಪರಿಸ್ಥಿತಿ ಹತೋಟಿಗೆ ತಂದಿದ್ದು, ಸಿಸಿಟಿವಿ ಕ್ಯಾಮರಾ ಪರಿಶೀಲಿಸಲಾಗುತ್ತಿದೆ ಎಂದು ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ. ಮೂರ್ತಿ ಮೇಲೆ ಬಿದ್ದಿರುವ ದ್ರವ್ಯದ ಮಾದರಿ ಸಂಗ್ರಹಿಸಿ ಎಫ್‌ಎಸ್‌ಎಲ್ ಕಳುಹಿಸಲಾಗಿದೆ. ಮೇಲ್ನೋಟಕ್ಕೆ ಇದು ಅಂಟು ಅಂಟಿನ ದ್ರವ್ಯದಂತಿದೆ. ಮೇಲ್ಗಡೆ ಮರವೂ ಇದೆ. ಮರದ ಎಲೆಗಳ ಮೇಲೂ ಈ ಅಂಟಿನ ರೀತಿಯ ದ್ರವ್ಯ ಅಲ್ಲಲ್ಲಿ ಚೆಲ್ಲಿದಂತಿದೆ. ಹೀಗಾಗಿ, ಅರಣ್ಯ ಇಲಾಖೆಯವರಿಗೂ ಪರಿಶೀಲಿಸಲು ಹೇಳಿದ್ದೇವೆ.