ಬೆಳಗಾವಿಯಲ್ಲಿ ಐಪಿಎಲ್​ ಫ್ಯಾನ್​ ಪಾರ್ಕ್​ ಆಯೋಜನೆ

ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವಿನಾಶ ಪೋತದಾರ ಮಾತನಾಡಿದರು. ಅರವಿಂದ ಗಾಯಕವಾಡ ಇದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವಿನಾಶ ಪೋತದಾರ ಮಾತನಾಡಿದರು. ಅರವಿಂದ ಗಾಯಕವಾಡ ಇದ್ದಾರೆ.
Published on
ಬೆಳಗಾವಿ: ಐಪಿಎಲ್​ ಮ್ಯಾಚ್​ ನಡೆಯದ ಪ್ರಮುಖ ನಗರಗಳಲ್ಲಿರುವ ಜನರಿಗೆ ಮೈದಾನದಲ್ಲಿ ಕುಳಿತು ನೇರವಾಗಿಯೇ ನೋಡುವ ಅನುಭವ ಒದಗಿಸುವ ನಿಟ್ಟಿನಲ್ಲಿ ನಗರದ ಯೂನಿಯನ್​ ಜಿಮಖಾನಾ ಮೈದಾನದಲ್ಲಿ ಏ.18 ಮತ್ತು 19ರಂದು ಫ್ಯಾನ್​ ಪಾರ್ಕ್​ ವ್ಯವಸ್ಥೆ ಮಾಡಲಾಗಿದೆ ಎಂದು ಬಿಸಿಸಿಐ ಪ್ರತಿನಿಧಿ ಅರವಿಂದ ಗಾಯಕವಾಡ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಸಿಸಿಐನಿಂದ ದೇಶದ ಪ್ರಮುಖ ನಗರಗಳಲ್ಲಿ ಫ್ಯಾನ್​ ಪಾರ್ಕ್​ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ ಬೆಳಗಾವಿ ಸಹ ಒಂದು. ಇದಕ್ಕಾಗಿ ಮೈದಾನದಲ್ಲಿ ಬೃಹತ್​ ಪರದೆ ಅಳವಡಿಸಲಾಗುತ್ತದೆ. ಎರಡೂ ದಿನ ಮಧ್ಯಾಹ್ನ 2.30ಕ್ಕೆ ಗೇಟ್​ಗಳು ತೆರೆಯಲಿದ್ದು, ಉಚಿತ ಪ್ರವೇಶ ಇರುತ್ತದೆ. ಶನಿವಾರದ ಆರ್​ಸಿಬಿ&ದೆಹಲಿ ಕ್ಯಾಪಿಟಲ್ಸ್​ ಮತ್ತು ಎಸ್​ಆರ್​ಎಚ್​&ಸಿಎಸ್​ಕೆ ಮ್ಯಾಚ್​. ಭಾನುವಾರದ ದಿನ ಕೆಕೆಆರ್​&ರಾಜಸ್ಥಾನ ರಾಯಲ್ಸ್​ ಹಾಗೂ ಪಂಜಾಬ ಕಿಂಗ್ಸ್​&ಎಲ್​ಎಸ್​ಜಿ ನಡುವಿನ ಆಟಗಳನ್ನು ವೀಕ್ಷಿಸಬಹುದು ಎಂದರು.
ಕರ್ನಾಟಕ ಕ್ರಿಕೆಟ್​ ಮಂಡಳಿ ಧಾರವಾಡ ವಲಯದ ಮಾಜಿ ಅಧ್ಯಕ್ಷ ಅವಿನಾಶ ಪೋತದಾರ ಮಾತನಾಡಿ, ಆರು ವರ್ಷಗಳಿಂದ ಬೆಳಗಾವಿಯಲ್ಲಿ ಫ್ಯಾನ್​ ಪಾರ್ಕ್​ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಕ್ರಿಕೆಟ್​ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆ ನೀಡುತ್ತಿದ್ದು, ಪ್ರತಿ ವರ್ಷವೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದರಲ್ಲಿ ಆಹಾರ ಮಳಿಗೆಗಳೂ ಇರಲಿದ್ದು, ಮೈದಾನದಲ್ಲಿ ಜನಸಮೂಹದಲ್ಲಿ ಕುಳಿತು ನೇರವಾಗಿ ಮ್ಯಾಚ್​ ನೋಡಿದ ಅನುಭವ ಪಡೆಯಬಹುದಾಗಿದೆ. ಇದು ಅಭಿಮಾನಿಗಳಿಗೆ ಒಳ್ಳೆಯ ಅವಕಾಶ ಒದಗಿಸಿಕೊಟ್ಟಂತಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net