6ರಿಂದ ರಾಜ್ಯಮಟ್ಟದ ಹ್ಯಾಂಡಬಾಲ್ ಪಂದ್ಯಾವಳಿ

ರಾಜ್ಯಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಹ್ಯಾಂಡಬಾಲ್ ಪಂದ್ಯಾವಳಿ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಡಾ.ರಾಮ ಕುಲಕರ್ಣಿ, ಪಿ.ಐ.ಭಂಡಾರಿ, ಸಂದೀಪ ಸಂಗೋರಾಮ ಇತರರಿದ್ದರು.
ರಾಜ್ಯಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಹ್ಯಾಂಡಬಾಲ್ ಪಂದ್ಯಾವಳಿ ಆಮಂತ್ರಣ ಪತ್ರಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಡಾ.ರಾಮ ಕುಲಕರ್ಣಿ, ಪಿ.ಐ.ಭಂಡಾರಿ, ಸಂದೀಪ ಸಂಗೋರಾಮ ಇತರರಿದ್ದರು.
Published on
ಅಥಣಿ: ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ರಾಜ್ಯಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಹ್ಯಾಂಡಬಾಲ್ ಪಂದ್ಯಾವಳಿಯನ್ನು ಡಿ.6, 7 ಮತ್ತು 8ರಂದು ಆಯೋಜಿಸಲಾಗಿದೆ ಎಂದು ಡಾ.ರಾಮ ಕುಲಕರ್ಣಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಸಂಯುಕ್ತ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಹ್ಯಾಂಡಬಾಲ್ ಪಂದ್ಯಾವಳಿಯಲ್ಲಿ ರಾಜ್ಯದ ಒಟ್ಟು 66 ಪುರುಷ ಮತ್ತು ಮಹಿಳಾ ತಂಡಗಳು ಭಾಗಿಯಾಗಲಿವೆ.
ಡಿ.6ರಂದು ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗುವುದು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ಶಾಸಕರಾದ ಲಕ್ಷ್ಮಣ ಸವದಿ, ಅಶೋಕ ಪಟ್ಟಣ ಭಾಗವಹಿಸುವರು ಎಂದರು.
ಚಿಕ್ಕೋಡಿ ಡಿಡಿಪಿಯು ಪಿ.ಐ.ಭಂಡಾರೆ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಂದೀಪ ಸಂಗೋರಾಮ, ಸಂಚಾಲಕ ಮಂಡಳಿ ಸದಸ್ಯರಾದ ಆನಂದ ಟೊನಪಿ, ಅನಿಲ ದೇಶಪಾಂಡೆ, ಅಥರ್ವ ದೇಶಪಾಂಡೆ, ಆಡಳಿತ ಅಧಿಕಾರಿ ಉದಯಕುಮಾರ ಕೋಠಿವಾಲೆ, ಪ್ರಾಚಾರ್ಯ ಎಂ.ಪಿ.ಮೇತ್ರಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ
ಪವಾರದೇಸಾಯಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net