ಬೆಳಗಾವಿ: ಜಿಲ್ಲೆಯ ಖ್ಯಾತ ಕವಿಗಳಾಗಿರುವ ಕವಿ ಎಸ್.ಡಿ.ಇಂಚಲ ಮತ್ತು ಉಳುವೀಶ ಹುಲೆಪ್ಪನವರಮಠ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಗೆ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ.
ಇಂಚಲ ರಾಜ್ಯಪ್ರಶಸ್ತಿಗೆ 2025ರಲ್ಲಿ ಪ್ರಕಟಗೊಂಡಿರುವ ಯಾವುದೇ ಸ್ವರಚಿತ ಪ್ರೌಢ ಕವನ ಸಂಕಲನ. ಹುಲೆಪ್ಪನವರಮಠ ಪ್ರಶಸ್ತಿಗೆ 2025ರಲ್ಲಿ ಪ್ರಕಟಕೊಂಡಿರುವ ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟ ಸ್ವರಚಿತ ಕವನ ಸಂಕಲನ ಕಳುಹಿಸಬೇಕು. ಯಾವುದೇ ಸಂಪಾದಿತ ಕೃತಿಗಳಾಗಿರಬಾರದು. ಪ್ರತಿ ಪ್ರಶಸ್ತಿಗೆ ಮೂರು ಪ್ರತ್ಯೇಕ ಕವನ ಸಂಕಲಗಳನ್ನು ಕಳುಹಿಸಿಕೊಡಬೇಕು.
ಕೃತಿಗಳನ್ನು ಜೂ.15ರೊಳಗೆ, ಡಾ. ಮಹೇಶ ಗುರನಗೌಡರ, ಪ್ರಾಧ್ಯಾಪಕರು, ಕನ್ನಡ ವಿಭಾಗ, ಲಿಂಗರಾಜ ಮಹಾವಿದ್ಯಾಲಯ, ತ್ಯಾಗವೀರ ಶಿರಸಂಗಿ ಲಿಂಗರಾಜ ರಸ್ತೆ, ಬೆಳಗಾವಿ ಇಲ್ಲಿಗೆ ಕಳುಹಿಸಬಹುದು ಎಂದು ಸಮಿತಿಯ ಅಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ ತಿಳಿಸಿದ್ದಾರೆ.