ಕಷ್ಟಕಾಲದಲ್ಲಿ ಕೈಹಿಡಿಯುವ ವಿಮೆ

 ವಿದ್ಯುತ್ ಸಹಕಾರ ಸಂಘದ ನೌಕರ ನಿಧನರಾದ ಹಿನ್ನೆಲೆಯಲ್ಲಿ ವಾರಸುದಾರರಿಗೆ ಮಂಜೂರಾದ ವಿಮಾ ಚೆಕ್ ಅನ್ನು ರಮೇಶ ಕತ್ತಿ ವಿತರಿಸಿದರು. ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ನೇಮಿನಾಥ ಖೇಮಲಾಪೂರೆ ಇತರರಿದ್ದರು.
ವಿದ್ಯುತ್ ಸಹಕಾರ ಸಂಘದ ನೌಕರ ನಿಧನರಾದ ಹಿನ್ನೆಲೆಯಲ್ಲಿ ವಾರಸುದಾರರಿಗೆ ಮಂಜೂರಾದ ವಿಮಾ ಚೆಕ್ ಅನ್ನು ರಮೇಶ ಕತ್ತಿ ವಿತರಿಸಿದರು. ಮಹಾವೀರ ನಿಲಜಗಿ, ಸತ್ಯಪ್ಪ ನಾಯಿಕ, ನೇಮಿನಾಥ ಖೇಮಲಾಪೂರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯ
  • ೨೩.೭೬ ಲಕ್ಷ ರೂ. ಚೆಕ್ ವಿತರಣೆ
ಹುಕ್ಕೇರಿ: ವಿಮೆಯಿಂದ ಬಂದ ಹಣ ಠೇವಣಿ ಮಾಡಿ, ಅದರಿಂದ ಬರುವ ದುಡ್ಡನ್ನು ಪಡೆದು ಜೀವನ ನಿರ್ವಹಣೆ ಮಾಡಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಈಚೆಗೆ ನಿಧನರಾದ ವಿದ್ಯುತ್ ಸಹಕಾರ ಸಂಘದ ನೌಕರ ಬೆಲ್ಲದ ಬಾಗೇವಾಡಿಯ ಸುರೇಶ ಕಳ್ಳಗೋಳ ಅವರ ಪತ್ನಿ ಸಂಗೀತಾಗೆ ಐಸಿಐಸಿಐ ಪ್ರೊಡೆನ್ಸಿಯಲ್ ವಿಮಾದಿಂದ ಮಂಜೂರಾದ ೨೩.೭೬ ಲಕ್ಷ ರೂ. ಚೆಕ್ ಅನ್ನು ಸ್ಥಳೀಯ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಶನಿವಾರ ವಿತರಿಸಿ ಮಾತನಾಡಿದರು.
ವಿದ್ಯುತ್ ಸಹಕಾರ ಸಂಘದ ನೌಕರರಿಗೆ ಅಳವಡಿಸಿದ ಜೀವವಿಮೆ ಕಷ್ಟಕಾಲದಲ್ಲಿ ಅನುಕೂಲವಾಗುತ್ತದೆ. ಸಹಕಾರ ಸಂಘದ  ಲೈನ್‌ಮನ್‌ಗಳು, ಅಲ್ಲಿನ ನೌಕರರ ದುಡಿಮೆ ಅಪಾಯಕಾರಿ ಈ ಹಿನ್ನೆಲೆಯಲ್ಲಿ ವಿಮಾ ಸೌಲಭ್ಯ ಅಳವಡಿಸಲಾಗಿದೆ. ಇಂತಹ ನಾಲ್ಕು ಪ್ರಕರಣಗಳಲ್ಲಿ ವಿಮಾ ಸೌಲಭ್ಯ ದೊರಕಿದೆ ಎಂದು ತಿಳಿಸಿದರು.
ಬಳಿಕ ಜನರ ಕುಂದು-ಕೊರತೆ ಆಲಿಸಿ ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇಲಾಖೆಯಿಂದ ಮಂಜೂರಾದ ಮದುವೆ ಸಹಾಯಧನದ ಆದೇಶಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಿದರು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ನಿರ್ದೇಶಕರಾದ ಸತ್ಯಪ್ಪ ನಾಯಿಕ, ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪೂರೆ, ವಿಮಾ ಕಂಪನಿ ಪ್ರಧಾನ ವ್ಯವಸ್ಥಾಪಕ ಸಂಜಯ ಇಂಚಲ, ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಗುರುರಾಜ ಕುಲಕರ್ಣಿ, ಶೀತಲ ಬ್ಯಾಳಿ, ಮುಖಂಡರಾದ ಸುನೀಲ ನೇರಲಿ, ಕೆಂಪಣ್ಣ ದೇಸಾಯಿ, ಚಿದಾನಂದ ಡಬ್ಬು, ರಾಜು ಮುನ್ನೋಳಿ, ಭರತೇಶ ನಾಯಿಕ, ಪುಟ್ಟು ಖಾಡೆ, ಚೆನ್ನಪ್ಪ ಗಜಬರ, ರಮೇಶ ಬೋಳಗಾಂವ, ಮಧುಕರ ಕರನಿಂಗ, ರೋಹಿತ ಹೆದ್ದೂರಶೆಟ್ಟಿ, ರಾಜು ಪಾಟೀಲ, ವಿರೂಪಾಕ್ಷ ಚೌಗಲಾ, ಮಹೇಶ ಬಡಗಾಂವಿ, ವಿನಾಯಕ ಸಂಕೇಶ್ವರಿ, ಆನಂದ ಲಕ್ಕುಂಡಿ, ಕಲ್ಲಣ್ಣ ಚೌಗಲಾ, ಅಽಕಾರಿಗಳಾದ ಶಶಿಕಾಂತ ವಂದಾಳೆ, ಶಶಿ ಭೂಸಗೋಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net