ಗೋವುಗಳಿಗೆ ಮೇವಿನ ಕೊರತೆ ನೀಗಿಸಲು ಸೂಚನೆ

ಹುಕ್ಕೇರಿ ತಾಲೂಕಿನ ಬೆಳವಿ ಸರ್ಕಾರಿ ಗೋಶಾಲೆಗೆ ರಮೇಶ ಕತ್ತಿ ಭೇಟಿ ನೀಡಿ ಪರಿಶೀಲಿಸಿದರು. ರಾಯಪ್ಪ ಡೂಗ, ಸುನೀಲ ಪರ್ವತರಾವ, ರೋಹನ್ ನೇಸರಿ, ಡಾ.ರಾಜು ಮೇತ್ರಿ ಇತರರಿದ್ದರು.
ಹುಕ್ಕೇರಿ ತಾಲೂಕಿನ ಬೆಳವಿ ಸರ್ಕಾರಿ ಗೋಶಾಲೆಗೆ ರಮೇಶ ಕತ್ತಿ ಭೇಟಿ ನೀಡಿ ಪರಿಶೀಲಿಸಿದರು. ರಾಯಪ್ಪ ಡೂಗ, ಸುನೀಲ ಪರ್ವತರಾವ, ರೋಹನ್ ನೇಸರಿ, ಡಾ.ರಾಜು ಮೇತ್ರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಗೋಶಾಲೆಗೆ ರಮೇಶ ಕತ್ತಿ ಭೇಟಿ
  • ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಆಗ್ರಹ
ಹುಕ್ಕೇರಿ: ಸರ್ಕಾರಿ ಗೋಶಾಲೆಯಲ್ಲಿರುವ ಗೋವುಗಳಿಗೆ ಸರಿಯಾಗಿ ಮೇವಿನ ದಾಸ್ತಾನು ಮಾಡಿರದ ಹಿನ್ನೆಲೆಯಲ್ಲಿ ಮಾಜಿ ಸಂಸದ ರಮೇಶ ಕತ್ತಿ ಪಶು ಇಲಾಖೆ ಆಸ್ಪತ್ರೆ ಸಹಾಯಕ ನಿರ್ದೇಶಕರ ರಾಜು ಮೇತ್ರಿ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಬೆಳವಿ ಗ್ರಾಮದ ಸರ್ಕಾರಿ ಗೋ ಶಾಲೆಗೆ ಶುಕ್ರವಾರ ಭೇಟಿ ನೀಡಿ ಗೋವುಗಳ ಆರೈಕೆ, ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿ ಮಾತನಾಡಿ, ಗೋವನ್ನು ಮಾತೆಗೆ ಹೋಲಿಸಿ ಪೂಜಿಸುತ್ತೇವೆ. ಇಂತಹ ಗೋವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಾಜಿ ಸಚಿವ ದಿ.ಉಮೇಶ ಕತ್ತಿ ಈ ಗೋಶಾಲೆಯನ್ನು ೪ ವರ್ಷಗಳ ಹಿಂದೆ ಪ್ರಾರಂಭಿಸಿದ್ದರು. ಆದರೆ, ಅವರ ಕಂಡ ಕನಸಿಗೆ ಬೆಂಬಲಿಸುವ ಬದಲಾಗಿ ಇಲ್ಲಿರುವ ಗೋವುಗಳಿಗೆ ಮೇವಿನ ಕೊರತೆ ಕಾಡುತ್ತಿದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರದಿಂದ ಪ್ರಾರಂಭಿಸಿದ ಏಕೈಕ ಗೋಶಾಲೆ ಇದಾಗಿದ್ದು, ಮೇವು ಸಂಗ್ರಹಿಸಲು ನಿರ್ಮಿಸಬೇಕಾದ ಗೋದಾಮು ಕಟ್ಟಡ ಪೂರ್ಣಗೊಳಿಸಿಲ್ಲ. ಅದರ ಅನುದಾನವನ್ನು ಮೇವು ಖರೀದಿಸಲು ಬಳಸಲಾಗಿದೆ ಎಂಬ ದೂರು ಕೇಳಿಬಂದಿದೆ. ಈ ಕುರಿತು ಸ್ಪಷ್ಟನೆ ನೀಡಬೇಕು. ಗೋವುಗಳಿಗೆ ಸಮರ್ಪಕವಾದ ಮೇವು, ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಗೋವುಗಳ ನಿರ್ವಹಣೆಗೆ ಕೇವಲ ಇಬ್ಬರು ದಿನಗೂಲಿ ಸಿಬ್ಬಂದಿ ಇರುವುದನ್ನು ತಿಳಿದು ಹೆಚ್ಚಿನ ಸಿಬ್ಬಂದಿ ನಿಯೋಜಿಸಲು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.
ಬೆಮುಲ್ ನಿರ್ದೇಶಕ ರಾಯಪ್ಪ ಡೂಗ, ಮುಖಂಡರಾದ ಸುನೀಲ ಪರ್ವತರಾವ, ರೋಹನ್ ನೇಸರಿ, ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜು ಮೇತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net