ನಂತರ ಗ್ರಾಪಂ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿದ ತಂಡ, ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳ ಆಯ್ಕೆ, ಅಂದಾಜು ತಯಾರಿ, ತಾಂತ್ರಿಕ ಅನುಮೋದನೆ, ಸ್ಥಳ ಪರಿಶೀಲನೆ, ಮಾಪನ, ಮಸ್ಟರ್‌ರೋಲ್ ನಿರ್ವಹಣೆ ಮತ್ತು ಕೂಲಿ ಪಾವತಿ ಪ್ರಕ್ರಿಯೆ ಕುರಿತು ಚರ್ಚಿಸಿತು. ಅನುಷ್ಠಾನದ ಸಂದರ್ಭದಲ್ಲಿ ತಾಂತ್ರಿಕ ಹಂತದಲ್ಲಿ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಅವುಗಳ ಪರಿಹಾರದ ಕುರಿತು ಮಾಹಿತಿ ಪಡೆದುಕೊಂಡಿತು.