ಡಿ.14ರಿಂದ ಇಂಡಿಗೋ ಆರಂಭ

ಡಿ.14ರಂದು ಇಂಡಿಗೋ ವಿಮಾನಗಳು ನವದೆಹಲಿ ಹಾರಾಟ
ಡಿ.14ರಂದು ಇಂಡಿಗೋ ವಿಮಾನಗಳು ನವದೆಹಲಿ ಹಾರಾಟ
Published on
ಬೆಳಗಾವಿ: ಇಲ್ಲಿನ ವಿಮಾನ ನಿಲ್ದಾಣದಿಂದ ಇಂಡಿಗೋ ಏರ್‌ಲೈನ್ಸ್ ವಿಮಾನಗಳು ಡಿ.14ರಿಂದ ನವದೆಹಲಿಗೆ ನಿಯಮಿತ ಕಾರ್ಯಾಚರಣೆ ಪುನರಾರಂಭಿಸಲಿವೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ಪ್ರಸ್ತುತ ಈ ನಿಲ್ದಾಣದಲ್ಲಿ ಎಲ್ಲ ವಿಮಾನಗಳು ಸಾಮಾನ್ಯವಾಗಿ ಕಾರ್ಯಾಚರಣೆಯಲ್ಲಿದ್ದು, ಯಾವುದೇ ಅನಿರೀಕ್ಷಿತ ರದ್ದತಿಗಳಿಲ್ಲ.
ಎಲ್ಲ ನಿಗದಿತ ವಿಮಾನಗಳು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈಚಿನ ಕೆಲ ರದ್ದತಿಗಳ ಬಗ್ಗೆ ಪ್ರಯಾಣಿಕರು ಆತಂಕ ಪಡೆಬೇಕಿಲ್ಲ. ಈ ನಿಲ್ದಾಣವು ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಜೈಪುರ, ಮುಂಬೈ ಮತ್ತು ದೆಹಲಿಗೆ ಸಂಪರ್ಕ ಹೊಂದಿದ್ದು, ಡಿ.14ರಂದು ಇಂಡಿಗೋ ವಿಮಾನಗಳು ನವದೆಹಲಿ ಹಾರಾಟ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net