ಭಾರತ ಯೋಗಾರೋಗ್ಯದಲ್ಲಿ ವಿಶ್ವಕ್ಕೆ ಪ್ರೇರಣೆಯಾಗಿದೆ

ಬೆಳಗಾವಿಯ ಸುವರ್ಣ ವಿಧಾನ ಸೌಧ ಆವರಣದಲ್ಲಿ ಭಾನುವಾರ ಜರುಗಿದ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೊಹಮ್ಮದ್‌ರೋಷನ್, ಅಭಯ ಪಾಟೀಲ, ಪ್ರೀತಿ ಕಾಮಕರ ಇತರರು ಪಾಲ್ಗೊಂಡಿದ್ದರು.
ಬೆಳಗಾವಿಯ ಸುವರ್ಣ ವಿಧಾನ ಸೌಧ ಆವರಣದಲ್ಲಿ ಭಾನುವಾರ ಜರುಗಿದ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೊಹಮ್ಮದ್‌ರೋಷನ್, ಅಭಯ ಪಾಟೀಲ, ಪ್ರೀತಿ ಕಾಮಕರ ಇತರರು ಪಾಲ್ಗೊಂಡಿದ್ದರು.
Published on
ಬೆಳಗಾವಿ: ಯೋಗಃ ಕರ್ಮಸು ಕೌಶಲಮ್ ಎನ್ನುವಂತೆ ಕೆಲಸದಲ್ಲಿ ನಿಪುಣತೆಯೇ ಯೋಗವಾಗಿದೆ. ಯೋಗ ಕೇವಲ ದೈಹಿಕ ವ್ಯಾಯಾಮ, ಕಸರತ್ತಲ್ಲ, ಬದಲಿಗೆ ನಮ್ಮ ದೇಹ, ಮನಸ್ಸು ಮತ್ತು ಆತ್ಮದ ಸಮ್ಮಿಲನದ ದಿವ್ಯ ಪ್ರಕ್ರಿಯೆಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುವರ್ಣ ವಿಧಾನಸೌಧ ಆವರಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ಧ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯೋಗಾಸನ ಕೈಗೊಂಡು ಅವರು ಮಾತನಾಡಿದರು.
ಜೂ.21 ಪ್ರಕೃತಿ ದೃಷ್ಟಿಯಿಂದಲೂ ಅತ್ಯಂತ ವಿಶೇಷವಾದ ದಿನ. ವರ್ಷದ ಅತ್ಯಂತ ದೀರ್ಘವಾದ ಹಗಲಿನ ದಿನವಾಗಿದೆ. ಬೇಸಿಗೆ ಆಯನ ಸಂಕ್ರಾಂತಿಯ ಪರ್ವಕಾಲವಾಗಿದೆ. ಆದಿಶಿವನು ಸಪ್ತರ್ಷಿಗಳಿಗೆ ಯೋಗ ಜ್ಞಾನವನ್ನು ಧಾರೆ ಎರೆಯಲು ಆರಂಭಿಸಿದರೆಂಬ ಐತಿಹ್ಯವಿರುವ ಈ ಪವಿತ್ರ ದಿನದಂದೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಭಾರತ ವಿಶ್ವಕ್ಕೆ ಪ್ರೇರಣೆಯಾಗಿದೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ದೂರದೃಷ್ಟಿಯ ನಾಯಕತ್ವದ ಫಲವಾಗಿ ನಮ್ಮ ಪ್ರಾಚೀನ ಕಾಲದ ಯೋಗ ಪದ್ಧತಿ ಇಂದು ಒಂದು ಜಾಗತಿಕ ಜನಾಂದೋಲನವಾಗಿ ರೂಪುಗೊಂಡಿರುವುದು ಹೆಮ್ಮೆಯ ಸಂಗತಿ. ಮೋದಿ ಮಹತ್ವಾಕಾಂಕ್ಷೆಯಂತೆ ವಿಶ್ವದ 195 ದೇಶಗಳು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿವೆ ಮತ್ತು ಕೋಟ್ಯಂತರ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದೆ ಎಂದು ಹೇಳಿದರು.
ಶಾಸಕ ಅಭಯ ಪಾಟೀಲ್, ಮೇಯರ್ ಪ್ರೀತಿ ಕಾಮಕರ, ಉಪ ಮೇಯರ್ ಹನುಮಂತ ಕೊಂಗಾಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಜಿಪಂ ಸಿಇಒ ರಾಹುಲ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪಾಲಿಕೆ ಆಯುಕ್ತ ಕಾರ್ತಿಕ ಎಂ., ,ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ ಸಿಂಗ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ ಸುಣಧೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net