ಕ್ರೀಡೆಯಿಂದ ಕ್ರಿಯಾಶೀಲತೆ ವೃದ್ಧಿ

ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೆಳವಡಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ರುದ್ರಯ್ಯ ರೊಟಯ್ಯನವರಮಠ, ಗೌಡಪ್ಪ ಸಾಲಹಳ್ಳಿ, ಮಡಿವಾಳಪ್ಪ ಕಾಡೇಶನವರ ಇತರರಿದ್ದರು.
ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೆಳವಡಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಡಾ.ವಿಶ್ವನಾಥ ಪಾಟೀಲ ಉದ್ಘಾಟಿಸಿದರು. ರುದ್ರಯ್ಯ ರೊಟಯ್ಯನವರಮಠ, ಗೌಡಪ್ಪ ಸಾಲಹಳ್ಳಿ, ಮಡಿವಾಳಪ್ಪ ಕಾಡೇಶನವರ ಇತರರಿದ್ದರು.
Published on

ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕ್ರಿಯಾಶೀಲತೆ ವೃದ್ಧಿಸಿಕೊಳ್ಳಬೇಕು ಎಂದು ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಗ್ರಾಮದ ಶ್ರೀ ಈಶಪ್ರಭು ಶಿಕ್ಷಣ ಸಂಸ್ಥೆ ವೀರರಾಣಿ ಮಲ್ಲಮ್ಮ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳವಡಿ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಶಿಸ್ತು, ಸಹಕಾರ ಮನೋಭಾವ ಮತ್ತು ನಾಯಕತ್ವ ಗುಣ ಬೆಳೆಸುವಲ್ಲಿ ಕ್ರೀಡೆ ಸಹಕಾರಿಯಾಗಿದೆ. ಕೇವಲ ಮನರಂಜನೆಯಲ್ಲದೆ, ಕ್ರೀಡೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಮತ್ತು ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಬಲ ನೀಡುತ್ತದೆ ಎಂದು ತಿಳಿಸಿದರು.

ವೀರರಾಣಿ ಮಲ್ಲಮ್ಮ ಬ್ಯಾಂಕ್ ಅಧ್ಯಕ್ಷ ರುದ್ರಯ್ಯ ರೊಟಯ್ಯನವರಮಠ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಕ್ರೀಡಾಕೂಟಕ್ಕೆ 25 ಸಾವಿರ ರೂ. ದೇಣಿಗೆ ನೀಡಿದ ಗೌಡಪ್ಪ ಸಾಲಹಳ್ಳಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಶಂಕರ ಕರಿಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾರಿಮನಿ ಕ್ರೀಡಾಜ್ಯೋತಿ ಬರಮಾಡಿಕೊಂಡರು.
ಸಂಸ್ಥೆ ಕಾರ್ಯದರ್ಶಿ ಮಡಿವಾಳಪ್ಪ ಕಾಡೇಶನವರ, ನಿರ್ದೇಶಕರಾದ ನಿಂಗಪ್ಪ ಕರಿಕಟ್ಟಿ, ಅಶೋಕ ಮಾರಿಹಾಳ, ಬಸಯ್ಯ ಬೋಜಯ್ಯನವರ, ಬಿಇಒ ಎ.ಎನ್.ಪ್ಯಾಟಿ, ಶಶಿಧರ ಪತ್ತಾರ, ಸುರೇಶ ವಾಲಿ, ಪ್ರಕಾಶ ಬಳಿಗಾರ, ಸಿದ್ದಪ್ಪ ಸಿದ್ದನ್ನವರ, ಗೌಡಪ್ಪ ಸಾಲಹಳ್ಳಿ, ಮುಕ್ಯಶಿಕ್ಷಕರಾದ ಪವನ ಹಿರೇಮಠ, ವಿಠ್ಠಲ ಸೆಳಕೆನ್ನವರ ಇತರರಿದ್ದರು. ಪ್ರಾಚಾರ್ಯ ಮಹಾಂತೇಶ ಉಪ್ಪಿನ ಸ್ವಾಗತಿಸಿದರು. ಶಿಕ್ಷಕ ವೀರೇಶ ಕಾಡೇಶನವರ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net