ಫೆ.1ರಂದು ಮಧ್ಯಾಹ್ನ 3ಕ್ಕೆ ನೂತನ ಗಣೇಶ ಮೂರ್ತಿಯ ಶೋಭಾಯಾತ್ರೆಯು ಶಿವಾಜಿ ಉದ್ಯಾನದಿಂದ ಆರಂಭಗೊಂಡು ವಿವಿಧ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪುವುದು. ಫೆ.5ರಂದು ಸಂಜೆ ನವಗ್ರಹ ವಾಸ್ತುಪೂಜೆ, ಫೆ.6ರಂದು ಬೆಳಗ್ಗೆ ಗಣೇಶನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗಣಹೋಮ ಮಧ್ಯಾಹ್ನ ಮಹಾಪ್ರಸಾದ ಇರಲಿದೆ ಎಂದು ನ್ಯೂ ಗೂಡ್ಸ್‌ಶೆಡ್ ರಸ್ತೆಯ ಗಣೇಶ ಸೇವಾ ಅಭಿವೃದ್ಧಿ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.